Friday, January 21, 2022

ಅತ್ತೆ, ಮಾವ, ಪತ್ನಿ ಮತ್ತು ಮಗನ ಮೇಲೆ ಪೊಲೀಸರಿಂದ ಹಲ್ಲೆ: ಅರ್ನಾಬ್ ಆರೋಪ

Follow Us

Newsics.com

ಮುಂಬೈ: ಮನೆಗೆ ದಾಳಿ ಮಾಡಿದ ಪೊಲೀಸರು ಮನೆಯಲ್ಲಿದ್ದ ತಮ್ಮ ಅತ್ತೆ, ಮಾವ, ಪತ್ನಿ ಮತ್ತು ಮಗುವಿನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ರಿಪಬ್ಲಿಕ್ ಸುದ್ದಿ ವಾಹಿನಿಯ ಮುಖ್ಯ ಸಂಪಾದಕ ಅರ್ನಾಬ್ ಗೋ ಸ್ವಾಮಿ ಆರೋಪಿಸಿದ್ದಾರೆ.

ಇದೀಗ ಅರ್ನಾಬ್ ಅವರನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿದೆ. ಪ್ರಾಥಮಿಕ ವಿಚಾರಣೆ ಬಳಿಕ ಅವರನ್ನು ಅಧಿಕೃತವಾಗಿ ಬಂಧಿಸುವ ಸಾಧ್ಯತೆ ಹೆಚ್ಚಾಗಿದೆ. ಕೆಲವು ಮೂಲಗಳು ಅರ್ನಾಬ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹೇಳುತ್ತಿವೆ. ಆದರೆ ಈ ಸಂಬಂಧ ಮುಂಬೈ ಪೊಲೀಸರು ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ.

ಎರಡು ದಿನಗಳ ಹಿಂದೆ ಅರ್ನಾಬ್ ಗೋ ಸ್ವಾಮಿ, ಸ್ಟುಡಿಯೊದಲ್ಲಿ ಬಹಿರಂಗ ಚರ್ಚೆಗೆ ಬರುವಂತೆ ಮುಂಬೈ ಪೊಲೀಸ್ ಆಯುಕ್ತ ಪರಂಬೀರ್ ಸಿಂಗ್ ಅವರಿಗೆ ಸವಾಲು ಹಾಕಿದ್ದರು

ಅರ್ನಾಬ್ ಗೋ ಸ್ವಾಮಿ ಪೊಲೀಸ್ ವಶಕ್ಕೆ

ಮತ್ತಷ್ಟು ಸುದ್ದಿಗಳು

Latest News

ಮೈಸೂರಿನಿಂದ ಚೆನ್ನೈಗೆ ವಿಮಾನದ ಮೂಲಕ ಜೀವಂತ ಹೃದಯ ರವಾನೆ

newsics.com ಮೈಸೂರು: ಮೆದುಳು ನಿಷ್ಕ್ರಿಯದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರ ಹೃದಯವನ್ನು ಮೈಸೂರಿನಿಂದ ಚೆನ್ನೈಗೆ ವಿಮಾನದ ಮೂಲಕ ರವಾನೆ ಮಾಡಲಾಗಿದೆ. ಜನವರಿ 18ರಂದು ರಸ್ತೆ ಅಪಘಾತದಿಂದ ದರ್ಶನ್(24) ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು....

ಒಂದೇ ಮೊಬೈಲ್ ಸಂಖ್ಯೆಯಿಂದ ಇನ್ನುಮುಂದೆ ಆರು ಮಂದಿ ಕೋವಿಡ್ ಲಸಿಕೆ ನೋಂದಾಯಿಸಬಹುದು

newsics.com ನವದೆಹಲಿ: ಕೋವಿಡ್ ಲಸಿಕೆಯನ್ನು ಹಾಕಲು ಕೋ-ವಿನ್ ವೆಬ್‌ಸೈಟ್‌ನಲ್ಲಿ ಒಂದು ಮೊಬೈಲ್ ಸಂಖ್ಯೆ ಬಳಸಿ ಆರು ಮಂದಿಯ ಹೆಸರನ್ನು ನೋಂದಾಯಿಸಬಹುದಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯು  ತಿಳಿಸಿದೆ. ಮೊದಲು ಒಂದು ಮೊಬೈಲ್ ಸಂಖ್ಯೆಯ ಮೂಲಕ  ನಾಲ್ಕು...

ಪಾಕಿಸ್ತಾನದ 35 ಯೂಟ್ಯೂಬ್‌ ಚಾನೆಲ್‌ ಬ್ಲಾಕ್‌

newsics.com ನವದೆಹಲಿ: ಭಾರತ ವಿರೋಧಿ ಸುಳ್ಳು ಸುದ್ದಿಗಳನ್ನು ಹರಡಿದ ಆರೋಪದ ಮೇಲೆ ಪಾಕ್‌ನ 35 ಯೂಟ್ಯೂಬ್‌ ಚಾನೆಲ್‌, ಎರಡು ಟ್ವಿಟ್ಟರ್‌ ಖಾತೆ, ಎರಡು ಇನ್‌ಸ್ಟಾಗ್ರಾಮ್‌ ಖಾತೆ, ಎರಡು ವೆಬ್‌ಸೈಟ್‌ ಮತ್ತು ಫೇಸ್‌ಬುಕ್‌ ಖಾತೆಗಳನ್ನು ಮಾಹಿತಿ ಮತ್ತು...
- Advertisement -
error: Content is protected !!