ಲಕ್ನೋ: ಸಾಮೂಹಿಕ ಅತ್ಯಾಚಾರದ ಬಳಿಕ ಯುವತಿ ಸಾವನ್ನಪ್ಪಿದ ಉತ್ತರ ಪ್ರದೇಶದ ಹರ್ತಾಸ್ ಗೆ ಭೇಟಿ ನೀಡುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಯತ್ನವನ್ನು ಪೊಲೀಸರು ವಿಫಲಗೊಳಿಸಿದ್ದಾರೆ. ಇದೀಗ ಅವರು ಸಂಚರಿಸುತ್ತಿದ್ದ ವಾಹನ ಮುಂದೆ ಪ್ರಯಾಣಿಸದಂತೆ ತಡೆ ಹಿಡಿಯಲಾಗಿದೆ.
ರಾಹುಲ್ ಗಾಂಧಿ ಕೂಡ ಜತೆಯಲಿದ್ದಾರೆ. ವಾಹನಕ್ಕೆ ಪೊಲೀಸರು ತಡೆ ಒಡ್ಡಿರುವ ಹಿನ್ನೆಲೆಯಲ್ಲಿ ಪ್ರಿಯಾಂಕಾ ಗಾಂಧಿ ಇದೀಗ ಕಾಲ್ನಡಿಗೆಯಲ್ಲಿ ಹೊರಟಿದ್ದಾರೆ.
ಮುನ್ನೆಚ್ಚರಿಕಾ ಕ್ರಮವಾಗಿ ಹರ್ತಾಸ್ ನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸಭೆ, ಸಮಾರಂಭಗಳಿಗೆ ಅನುಮತಿ ನಿರಾಕರಿಸಲಾಗಿದೆ.