newsics.com
ಕೇರಳ: ಇಲ್ಲಿನ ಪೊಲೀಸರು ಮುಟ್ಟುಗೋಲು ಹಾಕಿಕೊಂಡ ವಾಹನಗಳಲ್ಲೇ ತರಕಾರಿ ಬೆಳೆದು ಅಚ್ಚರಿ ಮೂಡಿಸಿದ್ದಾರೆ.
ಕೇರಳದ ತ್ರಿಶೂರ್ ಜಿಲ್ಲೆಯ ಚೆರುಥುರೂರ್ತಿ ಎನ್ನುವ ಠಾಣೆಯ ಸಿವಿಲ್ ಪೊಲೀಸರು ಇಂತಹ ವಿನೂತನ ಪ್ರಯತ್ನ ಮಾಡಿದ್ದಾರೆ. ರೈತನೊಬ್ಬ ಮೊದಲಿಗೆ ಮಿನಿ ಲಾರಿಯಲ್ಲಿ ಈ ರೀತಿ ತರಕಾರಿ ಬೆಳೆಗಳನ್ನು ಬೆಳೆದಿದ್ದು, ಬಳಿಕ ಇತರ ವಾಹನಗಳ ಮೇಲೆಯೂ ತರಕಾರಿ ಬೆಳೆಯಲಾಗುತ್ತಿದೆ. ಈ ರೀತಿ ವಾಹನಗಳನ್ನು ಬಳಸಿಕೊಳ್ಳುವುದರಿಂದ, ವ್ಯರ್ಥವಾಗಿ ನಿಂತಿರುವ ವಾಹನಗಳು ಬಳಕೆಗೆ ಯೋಗ್ಯವಾಗುತ್ತದೆ ಎನ್ನುತ್ತಾರೆ, ಸ್ಥಳೀಯ ಪೊಲೀಸ್ ಅಧಿಕಾರಿ ಸಿಂಪ್ಸನ್. ಮಿನಿ ಲಾರಿಯಲ್ಲಿ ಈ ರೀತಿ ತರಕಾರಿ ಬೆಳೆಯುವ ಪ್ರಯತ್ನಕ್ಕೆ ಮುಂದಾದೆವು. ಮೂರು ತಿಂಗಳ ಬಳಿಕ ಉತ್ತಮ ಇಳುವರಿ ನೀಡಿದ್ದರಿಂದ, ಇತರೆ ವಾಹನಗಳಲ್ಲೂ ತರಕಾರಿ ಬೆಳೆ ಬೆಳೆಯಲಾಗುತ್ತಿದೆ ಎಂದು ಸಿಂಪ್ಸನ್ ಹೇಳಿದ್ದಾರೆ.
ಮುಟ್ಟುಗೋಲು ವಾಹನಗಳಲ್ಲೇ ತರಕಾರಿ ಬೆಳೆದರು ಪೊಲೀಸರು…!
Follow Us