ಮುಂಬೈ: ಮೀಸಲಾತಿ ರದ್ದು ಕುರಿತಂತೆ ಚರ್ಚೆ ನಡೆಯುತ್ತಿರುವಾಗಲೇ ನಟಿ ಪೂಜಾ ಬೇಡಿ ಕೂಡ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೀಸಲಾತಿ ರದ್ದು ಪ್ರಸ್ತಾಪ ಸರಿಯಾದ ದಿಕ್ಕಿನತ್ತ ಹೆಜ್ಜೆ ಎಂದು ಬೇಡಿ ಅಭಿಪ್ರಾಯಪಟ್ಟಿದ್ದಾರೆ. ಎಲ್ಲ ಕಾಲಕ್ಕೂ ಮೀಸಲಾತಿ ಹಕ್ಕು ಮಂಡನೆ ಸಮಂಜಸವಲ್ಲ ಎಂದು ಪೂಜಾ ಬೇಡಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ