Sunday, May 29, 2022

ಕಳಪೆ ಬ್ಯಾಟಿಂಗ್; ನೈಟ್ ರೈಡರ್ಸ್’ಗೆ ಮಣಿದ ರಾಜಸ್ಥಾನ ರಾಯಲ್ಸ್

Follow Us

newsics.com
ದುಬೈ: ಕೊಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ 37 ರನ್ ಗಳಿಂದ ಸೋತಿದೆ. ಕೊಲ್ಕೊತ್ತಾ ನೈಟ್ ರೈಡರ್ಸ್ ನೀಡಿದ್ದ 175 ರನ್ ಸವಾಲನ್ನು ಬೆನ್ನತ್ತುವಲ್ಲಿ ರಾಜಸ್ಥಾನ ರಾಯಲ್ಸ್ ವಿಫಲವಾಯಿತು.
ಪಂಜಾಬ್ ವಿರುದ್ಧ ವೀರಾವೇಶದಿಂದ ಗೆದ್ದಿದ್ದ ರಾಜಸ್ಥಾನ ರಾಯಲ್ಸ್, ಇಂದು (ಸೆ.30) ಬ್ಯಾಟ್ಸ್ ಮನ್ ಗಳ ಕಳಪೆ ಪ್ರದರ್ಶನ ತಂಡವನ್ನು ಸೋಲಿನ ದವಡೆಗೆ ತಳ್ಳಿತು. ಜಾಸ್ ಬಟ್ಲರ್ (21), ರಾಹುಲ್ ತೆವಾಟಿಯಾ (14) ಮತ್ತು ಟಾಮ್ ಕರನ್ (54*) ಹೊರತುಪಡಿಸಿ ಉಳಿದೆಲ್ಲರೂ ಒಂದಂಕಿ ರನ್ ಗೆ ತೃಪ್ತಿಪಡಬೇಕಾಯಿತು.
ನಾಯಕ ಸ್ಟೀವನ್ ಸ್ಮಿತ್ (3), ಸಂಜು ಸ್ಯಾಮ್ಸನ್ (8), ರಾಬಿನ್ ಉತ್ತಪ್ಪ (2), ರಿಯಾನ್ ಪರಾಗ್ (1) ಮತ್ತು ಕಳೆದ ಪಂದ್ಯದ ಸೂಪರ್ ಹೀರೋ ರಾಹುಲ್ ತೆವಾಟಿಯಾ (14) ರಾಯಲ್ಸ್ ಬೌಲರ್ ಗಳ ಎದುರು ಸಿಡಿದು ನಿಲ್ಲಲು ವಿಫಲರಾದರು.
ರಾಯಲ್ಸ್ ದಾಂಢಿಗರನ್ನು ಪ್ರಾರಂಭದಿಂದಲೇ ಕಟ್ಟಿಹಾಕಿದ ಕೊಲ್ಕೊತ್ತಾ ಬೌಲರ್ ಗಳು ನಿಯಮಿತವಾಗಿ ವಿಕೆಟ್ ಉರುಳಿಸಿದರು. ಇದರಿಂದ ಒತ್ತಡಕ್ಕೆ ಸಿಲುಕಿದ ರಾಯಲ್ಸ್ 88 ರನ್ ಆಗುವಷ್ಟರಲ್ಲಿ 8 ವಿಕೆಟ್ ಗಳನ್ನು ಕಳೆದುಕೊಂಡು ಒಂದು ಹಂತದಲ್ಲಿ 100 ರನ್ನಿನೊಳಗೆ ಆಲೌಟಾಗುವ ಭೀತಿಗೆ ಸಿಲುಕಿತ್ತು. ತೀರಾ ಕಷ್ಟಪಟ್ಟು ತಂಡದ ಮೊತ್ತವನ್ನು ಶತಕದ ಗಡಿ ದಾಟಿಸಿ ನಿಟ್ಟುಸಿರಿಟ್ಟರು.
ಅಂತಿಮವಾಗಿ ರಾಜಸ್ಥಾನ ರಾಯಲ್ಸ್ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 137 ರನ್ ಗಳಿಸಿತು.

ಮತ್ತಷ್ಟು ಸುದ್ದಿಗಳು

Latest News

ದೇಶದಲ್ಲಿ 2,828 ಕೋವಿಡ್ ಪ್ರಕರಣ ಪತ್ತೆ: 14 ಮಂದಿ ಸಾವು

newsics.com ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 2,828 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, 14 ಮಂದಿ ಮೃತಪಟ್ಟಿದ್ದಾರೆ. ಸೋಂಕಿತರ ಸಂಖ್ಯೆ 4,31,53,043 ಏರಿಕೆಯಾಗಿದೆ. ಇದುವರೆಗೆ 4,26,11,370 ಮಂದಿ...

ರಸ್ತೆ ಅಪಘಾತ: ಅಯೋಧ್ಯೆಗೆ ತೆರಳುತ್ತಿದ್ದ ಕರ್ನಾಟಕದ 7 ಮಂದಿ ಸಾವು, 10 ಜನಕ್ಕೆ ಗಂಭೀರ ಗಾಯ

newsics.com ಉತ್ತರಪ್ರದೇಶ: ಕರ್ನಾಟಕದಿಂದ ಅಯೋಧ್ಯೆಗೆ ತೆರಳುತ್ತಿದ್ದ ಭಕ್ತರಿದ್ದ ಟೆಂಪೋ ಟ್ರಾವೆಲರ್​ ಹಾಗೂ ಟ್ರಕ್‌ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ 7 ಜನರು ಸಾವನ್ನಪ್ಪಿ, 10 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಉತ್ತರಪ್ರದೇಶದ ಮೋತಿಪುರ್ ಪ್ರದೇಶದ ಲಖಿಂಪುರ-ಬಹ್ರೈಚ್ ರಾಜ್ಯ...

ಮುಖ್ಯಮಂತ್ರಿ ಚಂದ್ರು ಕಾಂಗ್ರೆಸ್‌ಗೆ ಗುಡ್ ಬೈ

newsics.com ಬೆಂಗಳೂರು: ಹಿರಿಯ ನಟ, ಮುಖ್ಯಮಂತ್ರಿ ಚಂದ್ರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಅವರಿಗೆ ರಾಜಿನಾಮೆ ಪತ್ರವನ್ನು ಸಲ್ಲಿಸಿದ್ದಾರೆ. ಜನಸೇವೆ ಮಾಡುವ ಉದ್ದೇಶದಿಂದ ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದೆ....
- Advertisement -
error: Content is protected !!