newsics.com
ಚೆನ್ನೈ: ಉದ್ದದ ನಾಲಿಗೆ ಹೊಂದಿರುವುದಕ್ಕಾಗಿ ತಮಿಳುನಾಡಿನ ಯುವಕ ಕೆ. ಪ್ರವೀಣ್ ಸುದ್ದಿಯಾಗಿದ್ದಾರೆ.
ಇದೇ ಕಾರಣಕ್ಕಾಗಿ ಸಾಮಾಜಿಕ ತಾಣಗಳಲ್ಲಿ ಕೂಡ ವೈರಲ್ ಆಗಿದ್ದಾರೆ. ಅಷ್ಟೇ ಅಲ್ಲ, ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲೂ ಸ್ಥಾನ ಪಡೆದಿದ್ದಾರೆ. ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಕೂಡ ಸ್ಥಾನ ಪಡೆಯುವ ಅಭಿಲಾಷೆ ಹೊಂದಿದ್ದಾರೆ ಪ್ರವೀಣ್.
ವಿರುತ್‌ನಗರ್ ಜಿಲ್ಲೆಯ ತಿರುತಂಗಳ್‌ನ ನಿವಾಸಿ ಪ್ರವೀಣ್ (20), 10.8 ಸೆ.ಮೀ. ಉದ್ದದ ನಾಲಿಗೆ ಹೊಂದಿದ್ದಾರೆ.
ಸಾಮಾನ್ಯವಾಗಿ ಪುರುಷರ ನಾಲಿಗೆ ಸುಮಾರು 8.5 ಸೆ.ಮೀ.ವರೆಗೆ ಉದ್ದವಿರುತ್ತದೆ. ಆದರೆ ಉದ್ದದ ನಾಲಿಗೆ ಹೊಂದಿರುವ ಪ್ರವೀಣ್ ಅದರಲ್ಲಿಯೇ ದಾಖಲೆ ಮಾಡಿದ್ದು, ನಾಲಿಗೆ ಮೂಲಕವೇ ಪೇಟಿಂಗ್ ಕೂಡ ಮಾಡುವ ಕಲೆ ಸಿದ್ಧಿಸಿಕೊಂಡಿದ್ದಾರೆ. ರೊಬಾಟಿಕ್ಸ್ ಎಂಜಿನಿಯರಿಂಗ್ ಪದವಿ ಅಧ್ಯಯನ ಮಾಡುತ್ತಿದ್ದಾರೆ.
ಬೆನ್ನಲ್ಲಿ ಮಗು, ಹೆಗಲಲ್ಲಿ ಲಸಿಕೆ ಬ್ಯಾಗ್… ನದಿ ದಾಟಿದ ಮಂತಿ ಕುಮಾರಿ ಕರ್ತವ್ಯನಿಷ್ಠೆಗೆ ಸಲಾಂ…