Saturday, April 17, 2021

ಕೊರೋನಾ ಕೊನೆಗೊಳಿಸಲು ಭಕ್ತನ ಕತ್ತು ಕತ್ತರಿಸಿದ ಅರ್ಚಕ!

ಭುವನೇಶ್ವರ್: ನರಬಲಿ ಕೊಡುವುದರಿಂದ ಕೊರೋನಾ ಅಂತ್ಯಗೊಳಿಸಬಹುದೆಂಬ ವದಂತಿ ನಂಬಿದ ಅರ್ಚಕನೊಬ್ಬ ಭಕ್ತನ ಕತ್ತು ಕತ್ತರಿಸಿ ದೇವಿಗೆ ಹರಕೆ ಸಲ್ಲಿಸಿದ ಭಯಾನಕ ಘಟನೆ ಒಡಿಶಾದ ಕಟಕ್’ನಲ್ಲಿ ನಡೆದಿದೆ.
ಕಟಕ್ ನ‌ ನರಸಿಂಹಪುರ ಬ್ಲಾಕ್ ನಲ್ಲಿರುವ ಬಂಧಾಹುಡಾ ಪ್ರದೇಶದ ಬ್ರಹ್ಮಣಿ ದೇವಿ ದೇಗುಲದಲ್ಲಿ ಈ ಘಟನೆ ನಡೆದಿದೆ. ಈ ದೇವಾಲಯದ ಅರ್ಚಕ 70 ವರ್ಷದ ವೃದ್ಧ ಸನ್ಸಾರಿ ಓಜಾ ಈ ಕೃತ್ಯ ಎಸಗಿದ ಕ್ರೂರಿ. ಈತನಿಗೆ ಕೊರೋನಾ ಅಂತ್ಯಗೊಳಿಸಲು ನರಬಲಿ ಉತ್ತಮ ಉಪಾಯ ಎಂದು ಯಾರೋ ಹೇಳಿದ್ದರು ಎನ್ನಲಾಗಿದೆ.
ಹೀಗಾಗಿ ಈತ ದೇವಸ್ಥಾನಕ್ಕೆ ಬಂದು ದೇವರಿಗೆ ತಲೆಬಾಗಿ ನಮಸ್ಕರಿಸುತ್ತಿದ್ದ ಸರೋಜ್ ಕುಮಾರ್ ಪ್ರಧಾನ ಎಂಬಾತನ ಕತ್ತನ್ನು ಕತ್ತಿಯಿಂದ ಕತ್ತರಿಸಿದ್ದಾನೆ. ಬಳಿಕ ಕತ್ತಿ ಸಮೇತ ಸ್ಥಳೀಯ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಅಲ್ಲದೆ ಪೊಲೀಸರ ಎದುರು ಈ ಕೃತ್ಯಕ್ಕೆ ತನಗೆ ದೇವಿಯೇ ಆದೇಶಿಸಿದ್ದಳು ಎಂದಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ಆಸ್ಪತ್ರೆಗೆ ನುಗ್ಗಿ 850 ರೆಮಿಡಿಸಿವರ್ ಇಂಜೆಕ್ಷನ್ ಕಳ್ಳತನ

newsics.com ಭೋಪಾಲ್(ಮಧ್ಯಪ್ರದೇಶ): ಇಲ್ಲಿನ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ನುಗ್ಗಿದ ದುಷ್ಕರ್ಮಿಗಳು 850 ರೆಮಿಡಿಸಿವರ್ ಇಂಜೆಕ್ಷನ್ ಗಳನ್ನು ಕಳ್ಳತನ ಮಾಡಿದ್ದಾರೆ. ದೇಶದಲ್ಲಿ ಕೊರೋನಾ ಸೋಂಕು ಹೆಚ್ಚಾಗುತ್ತಿರುವ ನಡುವೆ ಕಾಳಸಂತೆಯಲ್ಲಿ ಔಷಧ...

ಕೇಂದ್ರ ಸಚಿವ ಕಿರೆನ್ ರಿಜಿಜುಗೆ ಕೊರೋನಾ ಸೋಂಕು

newsics.com ನವದೆಹಲಿ: ಕೇಂದ್ರ ಸಚಿವ ಕಿರೆನ್ ರಿಜಿಜು ಅವರಿಗೆ ಶನಿವಾರ ಕೊರೋನಾ ಸೋಂಕು ತಗುಲಿದೆ. ಈ ವಿಷಯವನ್ನು ಸ್ವತಃ ಸಚಿವ ಕಿರೆನ್ ರಿಜಿಜು ಅವರೇ ತಿಳಿಸಿದ್ದಾರೆ. ಟ್ವಿಟರ್ ನಲ್ಲಿ ಈ‌ ಮಾಹಿತಿ ಹಂಚಿಕೊಂಡಿರುವ ರಿಜಿಜು,...

ಕೊರೋನಾ ಸೋಂಕಿತರ ಚಿಕಿತ್ಸೆಗೆ ‌ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆ ಇಳಿಕೆ

newsics.com ನವದೆಹಲಿ: ಕೊರೋನಾ ಸೋಂಕಿತ ರೋಗಿಗಳ ಚಿಕಿತ್ಸೆಗೆ ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆಯನ್ನು ಫಾರ್ಮಾ ಕಂಪೆನಿಗಳು ‌ಸ್ವಪ್ರೇರಣೆಯಿಂದ ಇಳಿಕೆ ಮಾಡಿವೆ. ಕೆಡಿಲಾ ಕಂಪನಿಯು ತನ್ನ ರೆಮ್ಡೆಕ್ ಬ್ರಾಂಡಿನ ರೆಮ್ಡೆಸಿವಿರ್ ಬೆಲೆಯನ್ನು 2800 ರೂ.ನಿಂದ 899 ರೂಪಾಯಿಗೆ...
- Advertisement -
error: Content is protected !!