newsics.com
ಅಸ್ಸಾಂ: ಇಲ್ಲಿನ ನಾಗಾಂವ್ ಕೇಂದ್ರ ಕಾರಾಗೃಹ ಮತ್ತು ವಿಶೇಷ ಕಾರಾಗೃಹದ 85 ಖೈದಿಗಳಲ್ಲಿ ಎಚ್ಐವಿ ಸೋಂಕು ಇರುವುದು ದೃಢಪಟ್ಟಿದೆ. ಆರೋಗ್ಯ ಇಲಾಖೆಯ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದಾರೆ.
ಕೇಂದ್ರ ಕಾರಾಗೃಹದ 40 ಮತ್ತು ವಿಶೇಷ ಕಾರಾಗೃಹದ 45 ಖೈದಿಗಳಿಗೆ ಸೋಂಕು ದೃಢಪಟ್ಟಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಎಲ್ಲಾ ಸೋಂಕಿತರು ಮಾದಕ ವ್ಯಸನಿಗಳಾಗಿದ್ದು, ಒಂದೇ ಸಿರಿಂಜ್ ನಿಂದ ಇಂಜೆಕ್ಟ್ ಮಾಡಿಕೊಳ್ಳುತ್ತಿದ್ದರು. ಇದರಿಂದಾಗಿ ಸೋಂಕು ಹರಡಿದೆ ಎಂದು ತಿಳಿದುಬಂದಿದೆ.