Wednesday, March 3, 2021

ಮೋಟರ್ ಬೈಕ್ ರೇಸ್ ವೇಳೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ

Newsics.com

ದೆಹಲಿ: ರಾಜಧಾನಿ ದೆಹಲಿಯಲ್ಲಿ ಕೆಲವು ಯುವಕರು ಮೋಟರ್ ಬೈಕ್ ರೇಸ್ ವೇಳೆ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ್ದಾರೆ ಎಂದು ವರದಿಯಾಗಿದೆ. ಬಾಡಿಗೆಗೆ ಬೈಕ್ ಪಡೆದು ರೇಸ್ ನಲ್ಲಿ ತೊ಼ಡಗಿದ್ದ ಯುವಕರ ಗುಂಪು ಈ ರೀತಿ ಘೋಷಣೆ ಕೂಗಿದೆ ಎಂದು ವರದಿಯಾಗಿದೆ.

ಈ ಕುರಿತು ಸ್ಪಷ್ಟನೆ ನೀಡಿರುವ ದೆಹಲಿ ಪೊಲೀಸ್ ಕಂಟ್ರೋಲ್ ರೂಮ್ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕುರಿತಂತೆ ಮಾಹಿತಿ ಲಭಿಸಿತ್ತು. ಅದರಂತೆ ತನಿಖೆ ನಡೆಸಿದಾಗ ಬೈಕ್ ಸವಾರರು ರೇಸ್ ನಲ್ಲಿ ಒಂದೊಂದು ದೇಶ ಪ್ರತಿನಿಧಿಸುತ್ತಿದ್ದರು. ಇದರಲ್ಲಿ ಪಾಕಿಸ್ತಾನ ಕೂಡ ಸೇರಿತ್ತು.

ದೇಶಗಳ ಹೆಸರು ಹೇಳಿಕೊಂಡು ಬೈಕ್ ರೇಸ್ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಕೆಲವು ಸ್ಪರ್ಧಿಗಳು ಘೋಷಣೆ ಕೂಗಿದ್ದಾರೆ ಎಂದು ಹೇಳಿದೆ.

ದೆಹಲಿಯ ಖಾನ್ ಮಾರುಕಟ್ಟೆ ಸಮೀಪದ ಮೆಟ್ರೋ ರೈಲು ನಿಲ್ದಾಣದ ಬಳಿ ಈ ಪ್ರಕರಣ ವರದಿಯಾಗಿದೆ.

ಪ್ರಶ್ನೆ ಪತ್ರಿಕೆ ಸೋರಿಕೆ: ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕೆ ಸಿಎಂ ಆದೇಶ

ಮತ್ತಷ್ಟು ಸುದ್ದಿಗಳು

Latest News

ಕೊರೋನಾ ಲಸಿಕೆ ಪಡೆದ ನತಾಷಾ ಪೂನಾವಾಲ

newsics.com ಮುಂಬೈ:  ಮಾರಕ ಕೊರೋನಾ ತಡೆ ಲಸಿಕೆ, ಕೊವಿಶೀಲ್ಡ್ ಅಭಿವೃದ್ಧಿಪಡಿಸಿರುವ ಸೆರಂ ಸಂಸ್ಥೆಯ ಕಾರ್ಯಕಾರಿ ನಿರ್ದೇಶಕಿಯಾಗಿರುವ ನತಾಷಾ ಪೂನಾವಾಲ ಲಸಿಕೆ ಪಡೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಲಸಿಕೆ ಪಡೆದಿರುವ ಚಿತ್ರವನ್ನು...

ರಾಷ್ಟ್ರಮಟ್ಟದಲ್ಲಿ ಕರ್ನಾಟಕದ ಮಾನ ಹರಾಜು ಹಾಕಿದ ಸಿ ಡಿ

newsics.com ಬೆಂಗಳೂರು: ರಾಜ್ಯದ ಕೆಲವೇ ಕೆಲವು ರಾಜಕಾರಣಿಗಳ ಅಸಭ್ಯ ವರ್ತನೆಯಿಂದಾಗಿ ಮತ್ತೊಮ್ಮೆ ರಾಷ್ಟ್ರ ಮಟ್ಟದಲ್ಲಿ ಕರ್ನಾಟಕದ ರಾಜಕಾರಣಿಗಳ ಮಾನ ಹರಾಜು ಆಗಿದೆ. ಸಾರ್ವಜನಿಕ ಜೀವನದಲ್ಲಿ ಶಿಸ್ತು ಮತ್ತು ನೈತಿಕ ಅಧಃಪತನದಿಂದ ಈ ರೀತಿಯ ಘಟನೆ ಪುನರಾವರ್ತನೆಯಾಗುತ್ತಿದೆ...

ಜಾರಕಿಹೊಳಿ ರಾಜೀನಾಮೆ ನೀಡದಿದ್ದರೆ ಪ್ರಧಾನಿಗೆ ದೂರು

newsics.com ಬೆಂಗಳೂರು: ವಿವಾದಕ್ಕೆ ಗುರಿಯಾಗಿರುವ ಪ್ರಭಾವಿ ಸಚಿವ ರಮೇಶ್ ಜಾರಕಿಹೊಳಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡದಿದ್ದರೆ ಈ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೂರು ನೀಡುವುದಾಗಿ ಸೆಕ್ಸ್ ಸಿಡಿ ಬಿಡುಗಡೆ ಮಾಡಿರುವ...
- Advertisement -
error: Content is protected !!