newsics.com
ನವದೆಹಲಿ: ವಾಟ್ಸ್ಯಾಪ್, ಫೇಸ್ಬುಕ್, ಇನ್ಸ್ಟಾಗ್ರಾಂ ಸೇವೆಯಲ್ಲಿನ ವ್ಯತ್ಯಯದ ಬೆನ್ನಲ್ಲೇ ಜಿಯೋ ನೆಟ್ವರ್ಕ್ನಲ್ಲೂ ಸಮಸ್ಯೆಗಳು ಕಾಣಿಸಿಕೊಂಡಿವೆ.
ಜಿಯೋ ನೆಟ್ ವರ್ಕ್ ಸೇವೆ ಸ್ಥಗಿತದ ಬಗ್ಗೆ ನಾಲ್ಕು ಸಾವಿರಕ್ಕೂ ಹೆಚ್ಚು ಬಳಕೆದಾರರು ಟ್ವಿಟರ್ನಲ್ಲಿ ದೂರು ದಾಖಲಿಸಿದ್ದಾರೆ.
#jiodown ಭಾರತದಲ್ಲಿ ಟ್ವಿಟರ್ನಲ್ಲಿ ಟ್ರೆಂಡಿಂಗ್ ಆಗಿತ್ತು. ಡೌನ್ ಡಿಟೆಕ್ಟರ್ನಲ್ಲಿ ಸಾವಿರಾರು ಬಳಕೆದಾರರು ಜಿಯೋ ನೆಟ್ ವರ್ಕ್ನಲ್ಲಿ ನೆಟ್ ವರ್ಕ್ ಸಮಸ್ಯೆ ಬಗ್ಗೆ ದೂರು ನೀಡಿದ್ದಾರೆ.
ಜಿಯೋ ನೆಟ್ ವರ್ಕ್ ಸಮಸ್ಯೆ ಸೀಮಿತ ಸಂಖ್ಯೆಯ ಬಳಕೆದಾರರಲ್ಲಿ ಮಾತ್ರ ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆಯಾದರೂ, ಡೌನ್ ಡಿಟೆಕ್ಟರ್ ಭಾರತದಲ್ಲಿ ಜಿಯೋ ನೆಟ್ ವರ್ಕ್ ಸಮಸ್ಯೆ ಬಗ್ಗೆ ದೂರು ನೀಡುವವರ ಪ್ರಮಾಣ ಮಾತ್ರ ಹೆಚ್ಚುತ್ತಲೇ ಇದೆ ಎಂದು ವರದಿಗಳು ತಿಳಿಸಿವೆ.