ನವದೆಹಲಿ: ಗೋರೆಗಾಂವ್ನ ಫೈವ್ ಸ್ಟಾರ್ ಹೊಟೇಲ್ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆಯನ್ನು ಪೊಲೀಸರು ಗುರುವಾರ ರಾತ್ರಿ ಬಯಲಿಗೆಳೆದಿದ್ದು, ಬಾಲಿವುಡ್ ನಟಿ, ರೂಪದರ್ಶಿ ಅವರನ್ನು ಬಂಧಿಸಿದ್ದಾರೆ.
ಬಾಲಿವುಡ್ ನಟಿ, ಅರ್ಹನ್ ಖಾನ್ ನ ಮಾಜಿ ಪ್ರೇಯಸಿ ಬಿಗ್ಬಾಸ್ 13ನೇ ಸೀಸನ್ನ ಸ್ಪರ್ಧಿ ಅಮೃತಾ ಧನೋಹ (32), ರೂಪದರ್ಶಿ ರಿಚಾ ಸಿಂಗ್ ಅವರನ್ನು ವೇಶ್ಯಾವಾಟಿಕೆಗೆ ಹುಡುಗಿಯರನ್ನು ಪೂರೈಸುತ್ತಿದ್ದರು ಎಂಬ ಆರೋಪದ ಮೇಲೆ ಬಂಧಿಸಲಾಗಿದೆ.