Wednesday, May 31, 2023

PSLV SEC 47 ಉಡಾವಣೆಗೆ ಕ್ಷಣಗಣನೆ

Follow Us

* ಮುಂಜಾನೆಯೇ ತಿಮ್ಮಪ್ಪನ ದರ್ಶನ ಪಡೆದ ಶಿವನ್ ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮಹತ್ವಾಕಾಂಕ್ಷೆಯ ಮತ್ತೊಂದು ಉಡಾವಣೆಗೆ ಸಿದ್ಧತೆ ನೆಡೆಸಿದೆ. ಪಿಎಸ್‌ಎಲ್‌ವಿ ಎಸ್‌ ಇ ಸಿ -47 ರಾಕೆಟ್ ಉಡಾವಣೆಗೆ ಕ್ಷಣಗಣನೆ ಆರಂಭಗೊಂಡಿದ್ದು, ಮಂಗಳವಾರ ಬೆಳಿಗ್ಗೆ 5 ಗಂಟೆ 28 ನಿಮಿಷದಲ್ಲಿ ಆರಂಭಗೊಂಡಿರುವ ಕ್ಷಣಗಣನೆ 26 ಗಂಟೆಗಳ ಕಾಲ ಮುಂದುವರಿಯಲಿದೆ. ಪಿಎಸ್‌ಎಲ್‌ವಿ ಎಸ್ ಇ ಸಿ -47 ಅನ್ನು ಬುಧವಾರ ಬೆಳಗ್ಗೆ 9.28 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾಯಿಸಲಾಗುವುದು. ರಾಕೆಟ್ ಮೂಲಕ 714 ಕೆಜಿ ತೂಕದ ಕಾರ್ಟೊಸ್ಯಾಟ್ -3 ಉಪಗ್ರಹವನ್ನು ಉಡಾಯಿಸಲಿದೆ. ಅಲ್ಲದೆ, ಅಮೆರಿಕಾಗೆ ಸೇರಿದ 13 ವಾಣಿಜ್ಯ ನ್ಯಾನೊ ಉಪಗ್ರಹಗಳನ್ನು ನಭಕ್ಕೆ ಕಳುಹಿಸಲಿದೆ. ಈ ಪೈಕಿ ಫ್ಲೋಕ್ -4 ಪಿ ಎಂದು ಕರೆಯಲ್ಪಡುವ 12 ಪುಟ್ಟ ಉಪಗ್ರಹಗಳು ಮತ್ತು ಮೆಶ್ಬೆಡ್ ಎಂಬ ಮತ್ತೊಂದು ಚಿಕ್ಕ ಉಪಗ್ರಹವಿದೆ. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ನೆಡೆಸಲಾಗುವ 74 ನೇ ಉಡಾವಣೆಯಾಗಿದೆ. ಪಿಎಸ್‌ಎಲ್‌ವಿ ಎಸ್‌ಇ ಸಿ -47 ಉಡಾವಣೆ ಹಿನ್ನೆಲೆಯಲ್ಲಿ ಇಸ್ರೋ ಅಧ್ಯಕ್ಷ ಶಿವನ್ ಅವರು ಮಂಗಳವಾರ ಬೆಳಿಗ್ಗೆ ತಿರುಪತಿ ತಿರುಮಲಕ್ಕೆ ಭೇಟಿ ಶ್ರೀ ವೆಂಕಟೇಶ್ವರನ ಆರ್ಶಿವಾದ ಪಡೆದುಕೊಂಡರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್‌ಎಲ್‌ವಿ ಎಸ್‌ಇ ಸಿ -47 ರಾಕೆಟ್ ಉಡಾವಣೆ ಯಶಸ್ವಿಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮತ್ತಷ್ಟು ಸುದ್ದಿಗಳು

vertical

Latest News

Weekend With Ramesh; ಸಾಧಕರ ಕುರ್ಚಿಯಲ್ಲಿ ಡಿಕೆ ಶಿವಕುಮಾರ್!

newsics.com ಬೆಂಗಳೂರು: ಖಾಸಗಿವಾಹಿನಿಯಲ್ಲಿ ವೀಕೆಂಡ್ ವಿತ್ ರಮೇಶ್ ಐದನೇ ಸೀಸನ್​ನ ಈ ವಾರದ ಅತಿಥಿಯಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಗಮಿಸಲಿದ್ದಾರೆ ಎನ್ನುವ ಗಾಳಿ ಸುದ್ದಿಯೊಂದು ಹಬ್ಬಿದೆ. ಭಾನುವಾರದ ಎಪಿಸೋಡ್...

ತರಬೇತಿ ವಿಮಾನ ತುರ್ತು ಭೂಸ್ಪರ್ಶ; ತಪ್ಪಿದ ಭಾರೀ ಅನಾಹುತ

newsics.com ಬೆಳಗಾವಿ: ತರಬೇತಿ ವಿಮಾನವೊಂದು ತಾಂತ್ರಿಕ ತೊಂದರೆಯಿಂದ  ತುರ್ತು ಭೂಸ್ಪರ್ಶ ಆಗಿದೆ. ಈ ಘಟನೆ ಬೆಳಗಾವಿ ತಾಲೂಕಿನ ಹೊನ್ನಿಹಾಳ ಹೊರವಲಯದಲ್ಲಿ ನಡೆದಿದೆ. ರೆಡ್‌ಬರ್ಡ್  ಸಂಸ್ಥೆಗೆ ಸೇರಿದ VT- RBF ತರಬೇತಿ ವಿಮಾನ ಇದಾಗಿದ್ದು, ಘಟನೆ ನಡೆದ...

ಆಪರೇಷನ್ ಪಠ್ಯ ಪುಸ್ತಕ; ಪಠ್ಯಗಳ ಪರಿಷ್ಕರಿಸ್ತೇವೆಂದ ಶಿಕ್ಷಣ ಸಚಿವ ಮಧು ಬಂಗಾರಪ್ಪ

newsics.com ಬೆಂಗಳೂರು:  ಪಠ್ಯ ಪುಸ್ತಕ  ಪರಿಷ್ಕರಣೆ ನಾವು ಮಾಡ್ತೀವಿ. ಪ್ರಣಾಳಿಕೆಯಲ್ಲಿ ಕೊಟ್ಟ ಮಾತಿನಂತೆ ಪರಿಷ್ಕರಣೆ ಮಾಡ್ತೀವಿ. ಮಕ್ಕಳ ಮನಸ್ಸಿನಲ್ಲಿ ಕಲ್ಮಶ ತುಂಬುವ ಪಠ್ಯ ಕೈ ಬಿಡ್ತೀವಿ. ಈ ಬಗ್ಗೆ ಸಿಎಂ, ಡಿಸಿಎಂ ಜೊತೆ ಚರ್ಚಿಸಿ...
- Advertisement -
error: Content is protected !!