Wednesday, November 30, 2022

ತನ್ನೆದುರೇ ಸೆಕ್ಸ್ ಮಾಡಲು ಒತ್ತಾಯಿಸಿ ಯುವ ಜೋಡಿ ಮೇಲೆ ಅಂಟು ಸುರಿದು ಕೊಂದ ಪೂಜಾರಿ!

Follow Us

newsics.com

ಜೈಪುರ: ಪೂಜಾರಿಯೊಬ್ಬ ತನ್ನೆದುರೇ ಜೋಡಿಗೆ ಲೈಂಗಿಕ ಕ್ರಿಯೆ ನಡೆಸಲು ಒತ್ತಾಯಿಸಿ ಅಂಟು ಹಾಕಿ ಕೊಂದು ಹಾಕಿರುವ ಘಟನೆ ರಾಜಸ್ಥಾನದ ಉದಯಪುರದಲ್ಲಿ ನಡೆದಿದೆ.

ಮೃತರನ್ನು ಶಿಕ್ಷಕ ರಾಹುಲ್ ಮೀನಾ (30) ಮತ್ತು ಸೋನು ಕುನ್ವರ್ (28) ಎಂದು ಗುರುತಿಸಲಾಗಿದೆ. ಜೋಡಿ ಹತ್ಯೆಯಾದ 3 ದಿನಗಳ ಬಳಿಕ ಅವರಿಬ್ಬರ ಬೆತ್ತಲಾದ ಶವಗಳು ಅರಣ್ಯದಲ್ಲಿ ಪತ್ತೆಯಾಗಿವೆ. ಕೊಂದಿರುವ ಆರೋಪದ ಮೇಲೆ ಪೂಜಾರಿ ಭಲೇಶ್ ಕುಮಾರ್ (55)ನನ್ನು ಪೊಲೀಸರು ಬಂಧಿಸಿದ್ದಾರೆ.

ರಾಹುಲ್, ಸೋನುಗೆ ಬೇರೆಯವರ ಜತೆ ಮದುವೆಯಾಗಿತ್ತು. ಆದರೆ ಇಬ್ಬರು ಸಂಬಂಧ ಮುಂದುವರಿಸಿದ್ದರು. ಹೀಗಾಗಿ ರಾಹುಲ್‌ ತನ್ನ ಪತ್ನಿಯೊಂದಿಗೆ ಆಗಾಗ ಜಗಳವಾಡಲು ಪ್ರಾರಂಭಿಸಿದ್ದ. ಪೂಜಾರಿ ರಾಹುಲ್‌ ಹಾಗೂ ಸೋನು ಜೊತೆಗಿನ ಸಂಬಂಧವನ್ನು ರಾಹುಲ್‌ ಪತ್ನಿಗೆ ಹೇಳಿದ್ದಾನೆ ಎಂದು ತಿಳಿದ ರಾಹುಲ್, ಸುಳ್ಳು ಕಿರುಕುಳ ಪ್ರಕರಣ ದಾಖಲಿಸಿ, ಮಾನಹಾನಿ ಮಾಡುವುದಾಗಿ ಭಲೇಶ್‌ಗೆ ಬೆದರಿಕೆ ಹಾಕಿದ್ದಾನೆ. ಇಲ್ಲಿಯವರೆಗೆ ತಾನು ಗಳಿಸಿದ್ದ ಕೀರ್ತಿ ಈ ಸುಳ್ಳು ಆರೋಪದಿಂದ ಹಾಳಾಗಬಾರದೆಂಬ ಕಾರಣಕ್ಕೆ ಭಲೇಶ್ ರಾಹುಲ್ ಹಾಗೂ ಸೋನು ಅಕ್ರಮ ಸಂಬಂಧವನ್ನು ರೆಡ್ ಹ್ಯಾಂಡ್ ಆಗಿ ಎಲ್ಲರ ಮುಂದೆ ತೋರಿಸಲು ಹಾಗೂ ತನ್ನ ಸೇಡನ್ನು ತೀರಿಸಲು ಕ್ರಿಮಿನಲ್ ಪ್ಲಾನ್ ಮಾಡಿದ್ದ.

ರಾಹುಲ್ ಹಾಗೂ ಸೋನು ಅವರನ್ನು ಕಾಡಿಗೆ ಕರೆದುಕೊಂಡು ಹೋಗಿ, ಏಕಾಂತದಲ್ಲಿರುವಾಗ ತನ್ನೆದುರೇ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿದ್ದಾನೆ. ಇಬ್ಬರೂ ಲೈಂಗಿಕ ಕ್ರಿಯೆಯಲ್ಲಿದ್ದಾಗ ಅವರ ಮೇಲೆ ಫಾಸ್ಟ್ ಗಂ ಅನ್ನು ಸುರಿದಿದ್ದಾನೆ. ಇಬ್ಬರೂ ಆಕ್ಷೇಪಾರ್ಹ ಸ್ಥಿತಿಯಲ್ಲಿ ಎಲ್ಲರೆದುರು ಕಂಡುಬಂದರೆ ತಾನು ತಪ್ಪಿಸಿಕೊಳ್ಳಬಹುದು ಎಂಬುದು ಭಲೇಶ್‌ನ ಉದ್ದೇಶವಾಗಿತ್ತು.

ಇಬ್ಬರೂ ತಮ್ಮನ್ನು ತಾವು ಬೇರ್ಪಡಿಸಲು ಪ್ರಯತ್ನಿಸಿದ್ದು, ಅವರಿಬ್ಬರ ಚರ್ಮಗಳು ಕಿತ್ತು ಬರಲು ಪ್ರಾರಂಭಿಸಿವೆ. ಇಬ್ಬರೂ ಬೇರ್ಪಡುವುದನ್ನು ಕಂಡು ಪೂಜಾರಿ ರಾಹುಲ್‌ನ ಕತ್ತು ಸೀಳಿ, ಸೋನುಗೆ ಚಾಕುವಿನಿಂದ ಇರಿದು ಹತ್ಯೆ ನಡೆಸಿದ್ದಾನೆ.

‘ಕುಕ್ಕರ್ ಬಾಂಬ್’ – ತನಿಖೆ ಎನ್‌ಐಎಗೆ ಹಂಸ್ಥಾಂತರ

ಮತ್ತಷ್ಟು ಸುದ್ದಿಗಳು

vertical

Latest News

ಕುಕ್ಕರ್ ಬಾಂಬರ್‌ ಶಾರೀಕ್ ಖಾತೆಗೆ ಹಣ ವರ್ಗಾವಣೆ

newsics.com ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಆರೋಪಿ ಶಾರೀಕ್‌ಗೆ ಡಾಲರ್‌ಗಳ ಮೂಲಕ ಆತನ ಖಾತೆಗೆ ವರ್ಗಾವಣೆಯಾಗುತ್ತಿದ್ದು ಎನ್ನುವ ಸ್ಪೋಟಕ ಮಾಹಿತಿ ಹೊರ ಬಿದ್ದಿದೆ. ಶಾರೀಕ್‌ ಡಾರ್ಕ್ ವೆಬ್...

ನಟಿ ಮಲೈಕಾ ಅರೋರಾ ಪ್ರೆಗ್ನೆಂಟ್!

newsics.com ಮುಂಬೈ: ಬಾಲಿವುಡ್ ನಟಿ ಮಲೈಕಾ ಅರೋರಾ ಪ್ರಿಯತಮ ಅರ್ಜುನ್ ಕಪೂರ್ ಮಗುವಿಗೆ ತಾಯಿ ಆಗ್ತಿದ್ದಾರೆ ಎನ್ನುವ ಸುದ್ದಿ ಕೇಳಿಬಂದಿದೆ. ಮಲೈಕಾ ಮತ್ತೆ ಪ್ರೆಗ್ನೆಂಟ್ ಆಗಿದ್ದಾರೆ ಸಂತಸದ ವಿಚಾರವನ್ನು ಸದ್ಯದಲ್ಲೇ ಶೇರ್ ಮಾಡುತ್ತಾರೆ ಎಂದು ಅವರ...

ಹೃದಯಾಘಾತವಾಗಿ ದೇವಾಲಯದ ಆನೆ ಸಾವು

newsics.com ಪುದುಚೇರಿ: ಇತಿಹಾಸ ಪ್ರಸಿದ್ಧ ದೇಗುಲದ ಆನೆಯೊಂದು ಹೃದಯಾಘಾತವಾಗಿ ಮೃತಪಟ್ಟಿರುವ ಘಟನೆ ಪುದುಚೇರಿಯಲ್ಲಿ ನಡೆದಿದೆ. ಪುದುಚೇರಿಯ ಪ್ರಸಿದ್ಧ ದೇವಾಲಯ ಮನಕುಲ ವಿನಾಯಕರ ದೇಗುಲಕ್ಕೆ ಸೇರಿದ್ದ ಆನೆ ಲಕ್ಷ್ಮಿ ವಿಹರಿಸುತ್ತಿದ್ದಾಗ ಹಠಾತ್ ಕುಸಿದಿದೆ. ಈ ವೇಳೆ ಆನೆಗೆ...
- Advertisement -
error: Content is protected !!