newsics.com
ಪಂಜಾಬ್ : ಕೇಂದ್ರ ಸರ್ಕಾರದ ವಿವಾದ ಅಗ್ನಿಪಥ್ ಯೋಜನೆಯ ವಿರುದ್ಧ ಪಂಜಾಬ್ ವಿಧಾನಸಭೆಯಲ್ಲಿ ಇಂದು ನಿರ್ಣಯ ಅಂಗೀಕರಿಸಲಾಗಿದೆ.
ಅಗ್ನಿಪಥ್ ಯೋಜನೆಯು ಏಕಪಕ್ಷೀಯ ಘೋಷಣೆಯಾಗಿದ್ದು ಪಂಜಾಬ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ ಎಂದು ಪಂಜಾಬ್ ಸಿಎಂ ಭಗವಂತ್ ಮಾನ್ ಹೇಳಿದ್ದಾರೆ. ಕೇಂದ್ರ ಸರ್ಕಾರದ ಈ ನೀತಿಯು ರಾಷ್ಟ್ರದ ಸಶಸ್ತ್ರ ಪಡೆಗಳಲ್ಲಿ ಜೀವಮಾನದ ಸೇವೆ ಸಲ್ಲಿಸಲು ಬಯಸುವವರಿಗೆ ಅವಮಾನ ಮಾಡಿದಂತೆ ಎಂದು ಮಾನ್ ಹೇಳಿದ್ದಾರೆ .