newsics.com
ಚಂಢೀಗಢ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಇಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ. ಇದು ಮಾನ್ ಅವರ ಎರಡನೆ ಮದುವೆ. ಮೊದಲ ಪತ್ನಿಗೆ ಅವರು ವಿಚ್ಛೇದನ ನೀಡಿದ್ದಾರೆ.
ವಧು ಡಾ. ಗುರುಪ್ರೀತ್ ಕೌರ್. ಚಂಢೀಗಢದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಆಮ್ ಆದ್ಮಿ ಪಕ್ಷದ ಹಿರಿಯ ನಾಯಕರು ಮತ್ತು ಕುಟುಂಬ ಸದಸ್ಯರು ಹಾಜರಿದ್ದರು.
ಕುಟುಂಬ ಸದಸ್ಯರ ಒತ್ತಡಕ್ಕೆ ಮಣಿದು ಎರಡನೆ ಬಾರಿ ಮದುವೆಯಾಗುತ್ತಿರುವುದಾಗಿ ಭಗವಂತ್ ಮಾನ್ ಸಿಂಗ್ ಈ ಹಿಂದೆ ಹೇಳಿಕೆ ನೀಡಿದ್ದರು.