Tuesday, March 9, 2021

ಕೃಷಿ ಕಾಯ್ದೆ ವಿರೋಧಿಸಿ ಪಂಜಾಬ್ ವಕೀಲ ಆತ್ಮಹತ್ಯೆ

newsics.com
ನವದೆಹಲಿ: ಕೇಂದ್ರ ಮೂರು ಕೃಷಿ ಕಾಯ್ದೆ ವಿರೋಧಿಸಿ ಹಾಗೂ ರೈತ ಹೋರಾಟ ಬೆಂಬಲಿಸಿ ಪಂಜಾಬ್ ಮೂಲದ ವಕೀಲರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಟಿಕ್ರಿ ಗಡಿಭಾಗದಲ್ಲಿ ಈ ಘಟನೆ ನಡೆದಿದ್ದು, ಅಮರ್ ಜಿತ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡ ನ್ಯಾಯವಾದಿ. ಇವರು ಪಂಜಾಬಿನ ಜಲಾಲ್ ಬಾದ್ ಪ್ರದೇಶದವರು ಎಂದು ತಿಳಿದುಬಂದಿದೆ.
ಮೃತ ಅಮರ್ ಜಿತ್ ಸಿಂಗ್ ರೈತ ಹೋರಾಟದಲ್ಲಿ ಒಗ್ಗಟ್ಟು ತೋರಿಸುವ ನಿಟ್ಟಿನಲ್ಲಿ ಆತ್ಮಹತ್ಯೆ ಪತ್ರ ಬರೆದಿಟ್ಟು ವಿಷ ಕುಡಿಯುವ ಮೂಲಕ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಆತ್ಮಹತ್ಯೆ ಪತ್ರದಲ್ಲಿ, ‘ನಾನು ನನ್ನ ಜೀವವನ್ನು ರೈತರ ಹೋರಾಟಕ್ಕಾಗಿ ಸಮರ್ಪಿಸುತ್ತಿದ್ದೇನೆ. ಕೇಂದ್ರವು ಮೂರು ಕೃಷಿ ಕಾಯ್ದೆಗಳನ್ನು ಜಾರಿಗೊಳಿಸುವ ಮೂಲಕ ರೈತರನ್ನು ಸಮಸ್ಯೆಗೆ ದೂಡಿದೆ. ಸರ್ಕಾರ ರೈತರ ಸಮಸ್ಯೆಗಳಿಗೆ ಕಿವಿಗೊಡುತ್ತಿಲ್ಲ. ಈ ಕೃಷಿ ಕಾಯ್ದೆಗಳಿಂದಾಗಿ ರೈತರು ಕೆಟ್ಟ ಬದುಕನ್ನು ಅನುಭವಿಸುವಂತಾಗಿದೆ’ ಎಂದು ಬರೆದುಕೊಂಡಿದ್ದಾರೆ.
ಇವರು ಸಾಯುವ ಮುನ್ನ ಡಿಸೆಂಬರ್ 18 ರಂದು ಬರೆಯಲಾಗಿರುವ ಡೆತ್ ನೋಟ್ ಲಭ್ಯವಾಗಿದ್ದು,ಈ ಪತ್ರವನ್ನು ಪರಿಶೀಲನೆಗೆ ಒಳಪಡಿಸಲಾಗಿದೆ.
ಕೇಂದ್ರ ಸರ್ಕಾರದ ಮೂರು ಕೃಷಿ ನೀತಿಗಳನ್ನು ವಿರೋಧಿಸಿ ರೈತರಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಹರ್ಯಾಣ ಮೂಲದ ಸಿಖ್ ಗುರುಗಳಾದ ಬಾಬಾ ರಾಮ್ ಸಿಂಗ್(65) ತಮಗೆ ತಾವೇ ಗುಂಡು ಹಾರಿಸಿಕೊಳ್ಳುವ ಮೂಲಕ ಆತ್ಮಹತ್ಯೆಗೆ ಶರಣಾಗಿದ್ದರು. ನಂತರ ಪಂಜಾಬ್ ಮೂಲದ 22 ವಯಸ್ಸಿನ ರೈತರೊಬ್ಬರು ಹಾಗೂ 66 ವರ್ಷದ ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದರು.

ಮತ್ತಷ್ಟು ಸುದ್ದಿಗಳು

Latest News

ಕೊರೋನಾ ಲಸಿಕೆ ಪಡೆದ 48 ಗಂಟೆ ತನಕ ವಿಮಾನ ಚಲಾಯಿಸುವಂತಿಲ್ಲ

newsics.com ನವದೆಹಲಿ:  ಕೊರೋನಾ ಲಸಿಕೆ ಸ್ವೀಕಾರ ಸಂಬಂಧ ವಿಮಾನಯಾನ ಸಿಬ್ಬಂದಿಗೆ ನಾಗರಿಕ ವಿಮಾನಯಾನ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ವಿಮಾನದ ಪೈಲಟ್ ಮತ್ತು ಇತರ ಸಿಬ್ಬಂದಿ ಕೊರೋನಾ...

ಧೂಪದ ಮರ ಕಡಿಯುವಾಗ ಸಿಲುಕಿ ಮೂವರು ಯುವಕರ ಸಾವು

newsics.comಮಂಗಳೂರು: ಧೂಪದ ಮರ‌ ಕಡಿಯುವ ವೇಳೆ ಮೂವರು ಮರದಡಿ ಸಿಲುಕಿ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಟ್ರಮೆ ಸಮೀಪ ಮಂಗಳವಾರ ನಡೆದಿದೆ.ಪಟ್ರಮೆ ಗ್ರಾಮದ ಅನಾರು ಬಳಿ‌...

ಮದುವೆಯಾಗಲು ಧರ್ಮದ ಬಗ್ಗೆ ಸುಳ್ಳು ಮಾಹಿತಿ: ಆರೋಪಿ ವಿರುದ್ಧ ಪ್ರಕರಣ ದಾಖಲು

newsics.com ಗೋರಖ್ ಪುರ:  ಹಿಂದೂ ಎಂದು ಹೇಳಿಕೊಂಡು ಮದುವೆಯಾಗಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯೊಬ್ಬನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಉತ್ತರಪ್ರದೇಶದ ಗೋರಖ್ ಪುರದಲ್ಲಿ ಈ ಪ್ರಕರಣ ವರದಿಯಾಗಿದೆ. ಮೈನುದ್ದೀನ್ ಎಂಬ ಹೆಸರಿನ ವ್ಯಕ್ತಿ ತನ್ನನ್ನು ಮುನ್ನಾ...
- Advertisement -
error: Content is protected !!