newsics.com
ಚೆನ್ನೈ: ಕೊರೋನಾ ಕಾರಣಕ್ಕೆ ಪತಿ-ಪತ್ನಿ ಮಧ್ಯೆ ಆರಂಭವಾದ ಜಗಳ ಇಬ್ಬರ ಆತ್ಮಹತ್ಯೆಯಲ್ಲಿ ಅಂತ್ಯವಾಗಿದೆ.
ಚೆನ್ನೈನ ಮಹಾಬಲಂ ಎಂಬಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಮಣಿಕಂಠನ್(35), ರಾಧಿಕಾ(25) ಆತ್ಮಹತ್ಯೆಗೆ ಶರಣಾದ ದಂಪತಿ. 10 ತಿಂಗಳ ಹಿಂದೆ ಇಬ್ಬರ ವಿವಾಹವಾಗಿತ್ತು. ಮಣಿಕಂಠನ್ ಕೆಮಿಕಲ್ ಫ್ಯಾಕ್ಟರಿಯೊಂದರ ಉದ್ಯೋಗಿಯಾಗಿದ್ದ ರಾಧಿಕಾ ಕಿಲ್ಪೌಕ್‌ನಲ್ಲಿ ಉದ್ಯೋಗ ಮಾಡುತ್ತಿದ್ದಳು. ಎರಡು ತಿಂಗಳ ಹಿಂದೆ ಮಣಿಕಂಠನ್‌ಗೆ ಕೊರೋನಾ ಸೋಂಕು ತಗುಲಿತ್ತು. ಆತ ಚಿಕಿತ್ಸೆ ಪಡೆದು ಗುಣ ಹೊಂದಿದ್ದ. ಆದರೆ, ಈ ವಿಷಯವಾಗಿ ಮನೆಯಲ್ಲಿ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು.
ಇದೇ ಜಗಳ ತಾರಕಕ್ಕೆ ಹೋಗಿ 15 ದಿನಗಳ ಹಿಂದೆ ರಾಧಿಕಾ ಸೀಮೆಎಣ್ಣೆ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಳು. ಆಕೆಯನ್ನು ಕಿಲ್ಪೌಕ್ ಮೆಡಿಕಲ್ ಕಾಲೇಜ್ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಗುಣವಾಗಿ ಬಂದ ಆಕೆಯ ಜತೆ ಮತ್ತೆ ಮಣಿಕಂಠನ್ ಜಗಳವಾಡಿದ್ದ. ಶುಕ್ರವಾರ ಜಗಳವಾಡಿಕೊಂಡು ಮಣಿಕಂಠನ್ ಮನೆಯಿಂದ ಹೊರಹೋಗಿದ್ದ. ಆದರೆ, ರಾಧಿಕಾ ಮನೆಯಲ್ಲೇ ನೇಣು ಹಾಕಿಕೊಂಡಿದ್ದಳು. ಮನೆಗೆ ವಾಪಸಾದ ಪತಿ ಪತ್ನಿಯ ಪರಿಸ್ಥಿತಿ ನೋಡಿ ಆತನೂ ನೇಣಿಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ದೇಶದಲ್ಲಿ ಒಂದೇ ದಿನ 86 961 ಮಂದಿಗೆ ಕೊರೋನಾ ಸೋಂಕು, 1130 ಬಲಿ
ಮೈಸೂರಿನಲ್ಲಿ ನಿವೃತ್ತ ಪ್ರಾಂಶುಪಾಲರ ಬರ್ಬರ ಹತ್ಯೆ