ನವದೆಹಲಿ: ರೈಲ್ವೆ ಮಂಡಳಿ ಸುಧಾರಣೆಗೆ ಮಂಡಳಿ ಪುನಾರಚನೆ ಮತ್ತು ಅಧಿಕಾರಿಗಳ ಕೇಡರ್ ಗಳ ವಿಲೀನ ಪ್ರಸ್ತಾವನೆಗೆ ಮಂಗಳವಾರ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ.
ಮಂಡಳಿಯ ಪದಾಧಿಕಾರಿಗಳ ಸಂಖ್ಯೆಯನ್ನು 8ರಿಂದ 5ಕ್ಕೆ ಇಳಿಸಲಾಗುತ್ತಿದೆ. ವಿವಿಧ ಕೇಡರ್ ಗಳ ನಿರ್ವಹಣಾ ಸಿಬ್ಬಂದಿಯನ್ನು ವಿಲೀನಗೊಳಿಸಿ ರೈಲ್ವೆ ಮ್ಯಾನೇಜ್ಮೆಂಟ್ ಸಿಸ್ಟಂ ಅಡಿ ತರಲಾಗುತ್ತಿದೆ.
ರೈಲ್ವೆ ಮಂಡಳಿಯಲ್ಲಿ ಈವರೆಗೆ ಇದ್ದ ಟ್ರಾಫಿಕ್, ರೋಲಿಂಗ್ ಸ್ಟಾಕ್, ಟ್ರಾಕ್ಷನ್ ಆ್ಯಂಡ್ ಇಂಜಿನಿಯರಿಂಗ್ ಸದಸ್ಯರ ಬದಲಾಗಿ, ಹೊಸ ಮಂಡಳಿಯಲ್ಲಿ ಆಪರೇಷನ್, ಬಿಜಿನೆಸ್ ಡೆವಲಪ್ಮೆಂಟ್, ಹ್ಯೂಮನ್ ರಿಸೋರ್ಸಸ್, ಇನ್ಫ್ರಾಸ್ಟ್ರಕ್ಚರ್ ಆ್ಯಂಡ್ ಫೈನಾನ್ಸ್ ಸದಸ್ಯರಿರಲಿದ್ದಾರೆ.
ರೈಲ್ವೆ ಮಂಡಳಿ ಸುಧಾರಣೆಗೆ ಕೇಂದ್ರ ಕ್ರಮ
Follow Us