ದೆಹಲಿ: ಹೊಸ ವರ್ಷ ಆರಂಭದ ಮೊದಲ ದಿನವೇ ರೈಲ್ವೆ ಇಲಾಖೆ ತನ್ನ ಪ್ರಯಾಣಿಕರಿಗೆ ಶಾಕ್ ನೀಡಿದೆ.
ರೈಲ್ವೆ ಸೇವೆಗಳ ಶುಲ್ಕವನ್ನು ಜನವರಿ 1 ರಿಂದ ಅನ್ವಯವಾಗುವಂತೆ ಹೆಚ್ಚಳ ಮಾಡಿದೆ. ಉಪನಗರ ರೈಲುಗಳನ್ನು ಹೊರತುಪಡಿಸಿ, ಉಳಿದೆಲ್ಲಾ ರೈಲ್ವೆ ಸೇವೆಗಳಲ್ಲಿ ಶುಲ್ಕ ಏರಿಕೆಯಾಗಿದೆ.
ಸಾಮಾನ್ಯ ಪಯಣಕ್ಕೆ ಪ್ರತಿ ಕಿಮೀಗೆ 1 ಪೈಸೆ, ಮೈಲ್ ಹಾಗೂ ಎಕ್ಸ್ಪ್ರೆಸ್ಗೆ ಪ್ರತಿ ಕಿ.ಮೀ.ಗೆ 2 ಪೈಸೆ, ಎಸಿ ಪ್ರಯಾಣಿಕರಿಗೆ ಪ್ರತಿ ಕಿ.ಮೀ.ಗೆ 4 ಪೈಸೆ ಹೆಚ್ಚಿಸಲಾಗಿದೆ.
ರಾಜಧಾನಿ, ಶತಾಬ್ದಿ, ತುರಂತೋ, ವಂದೇ ಭಾರತ್, ಹಮ್ಸಫರ್, ಮಹಾಮಾನ, ಗತಿಮಾನ್, ಅಂತ್ಯೋದಯ, ಗರೀಬ್ ರಥ, ಜನ್ ಶತಾಬ್ದಿ, ರಾಜ್ಯ ರಾಣಿ, ಯುವ ಎಕ್ಸ್ಪ್ರೆಸ್, ಸುವಿಧಾ, ವಿಶೇಷ ರೈಲು ಮತ್ತು ಎಸಿ ಮೆಮು ಹಾಗೂ ಎಸಿ ಡೆಮು ರೈಲುಗಳ ದರದಲ್ಲಿ ಏರಿಕೆಯಾಗಿದೆ. ರಿಸರ್ವೇಷನ್ ಶುಲ್ಕ ಮತ್ತು ಸೂಪರ್‌ಫಾಸ್ಟ್ ಶುಲ್ಕದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಇಲಾಖೆ ತಿಳಿಸಿದೆ.
ರೈಲ್ವೆ ಪ್ರಯಾಣ ದರ ಹೆಚ್ಚಳ ಬಗ್ಗೆ ಡಿ.27 ರಂದೇ ನ್ಯೂಸಿಕ್ಸ್.ಕಾಮ್ ಸುಳಿವು ನೀಡಿತ್ತು.