ಚೆನ್ನೈ: 1971ರಲ್ಲಿ ಪೆರಿಯಾರ್ ಅವರು ನಡೆಸಿದ ಮೆರವಣಿಗೆಯ ಕುರಿತು ತಮ್ಮ ಹೇಳಿಕೆಗೆ ಕ್ಷಮೆಯಾಚಿಸಲು ತಮಿಳು ಮೆಗಾಸ್ಟಾರ್ ರಜನೀಕಾಂತ್ ನಿರಾಕರಿಸಿದ್ದಾರೆ.
ರಜನಿಕಾಂತ್ ಕ್ಷಮೆ ಕೋರಬೇಕು ಎಂದು ಒತ್ತಾಯಿಸಿ ಪೆರಿಯಾರ್ ದ್ರಾವಿಡರ್ ಕಳಗಂ(ಪಿಡಿಕೆ) ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಅವರು, ತಮ್ಮ ಹೇಳಿಕೆ ಊಹಾಪೋಹವಲ್ಲ. 2017ರಲ್ಲಿ ಔಟ್‍ಲುಕ್ ಪತ್ರಿಕೆಯಲ್ಲಿ ಆ ಕುರಿತು ವರದಿ ಪ್ರಕಟಗೊಂಡಿದೆ. ಆದ್ದರಿಂದ ಕ್ಷಮೆಯಾಚಿಸುವುದಿಲ್ಲ, ವಿಷಾದವನ್ನೂ ವ್ಯಕ್ತಪಡಿಸುವುದಿಲ್ಲ ಎಂದಿದ್ದಾರೆ.