ಜೈಪುರ: ರಾಜಸ್ತಾನ ರಾಜಕೀಯ ಬಿಕ್ಕಟ್ಟು ನಿರ್ಣಾಯಕ ಹಂತ ತಲುಪಿದೆ. ಸ್ಪೀಕರ್ ನೀಡಿರುವ ಅನರ್ಹತೆ ಪ್ರಕ್ರಿಯೆ ನೋಟಿಸ್ ಪ್ರಶ್ನಿಸಿ ಕಾಂಗ್ರೆಸ್ ಭಿನ್ನಮತೀಯ ನಾಯಕ ಸಚಿನ್ ಪೈಲಟ್ ರಾಜಸ್ತಾನ ಹೈಕೋರ್ಟ್ ನಲ್ಲಿ ಸಲ್ಲಿಸಿರುವ ಅರ್ಜಿ ತೀರ್ಪು ಇಂದು ಹೊರ ಬರುವ ಸಾಧ್ಯತೆಯಿದೆ. ನೋಟಿಸ್ ಗೆ ಉತ್ತರಿಸಲು ಸ್ಪೀಕರ್ ನೀಡಿರುವ ಗಡುವು ಕೂಡ ಇಂದೇ ಕೊನೆಗೊಳ್ಳಲಿದೆ.
ಇದೀಗ ಹೈಕೋರ್ಟ್ ನಲ್ಲಿ ವಾದ ಆರಂಭವಾಗಿದ್ದು, ಸಚಿನ್ ಪೈಲಟ್ ಪರ ಹರೀಶ್ ಸಾಳ್ವೆ ವಾದ ಮಂಡಿಸುತ್ತಿದ್ದಾರೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಪರವಾಗಿ ಹಿರಿಯ ನ್ಯಾಯವಾದಿ ಅಭಿಷೇಕ್ ಮನು ಸಿಂಘ್ವಿ ಹಾಜರಾಗಿದ್ದಾರೆ. ಸದನದಲ್ಲಿ ಸ್ಪೀಕರ್ ಅವರದ್ದು ಪರಮಾಧಿಕಾರ. ಅವರ ತೀರ್ಮಾನವನ್ನು ಪ್ರಶ್ನಿಸುವ ಹಾಗಿಲ್ಲ ಎಂಬ ವಾದವನ್ನು ಸಿಂಘ್ವಿ ಮಂಡಿಸಿದ್ದಾರೆ.
ಹೈಕೋರ್ಟ್ ತೀರ್ಪು ರಾಜ್ಯ ಸರ್ಕಾರದ ಭವಿಷ್ಯ ನಿರ್ಧರಿಸಲಿದೆ. 102 ಶಾಸಕರು ಈಗಲೂ ಕಾಂಗ್ರೆಸ್ ಸರ್ಕಾರವನ್ನು ಬೆಂಬಲಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹಕ್ಕು ಮಂಡನೆ ಮಾಡಿದ್ದಾರೆ.