newsics.com
ಶಾರ್ಜಾ: ಐಪಿಲ್ ಟೂರ್ನಿಯ ನಾಲ್ಕನೇ ಪಂದ್ಯದಲ್ಲಿ 17 ರನ್ಗಳ ಅಮೋಘ ಜಯ ಸಾಧಿಸುವ ಮೂಲಕ ರಾಜಸ್ಥಾನ ರಾಯಲ್ಸ್ ತಂಡ ಪ್ರಸಕ್ತ ಟೂರ್ನಿಯಲ್ಲಿ ಮೊದಲ ಗೆಲುವಿನ ನಗೆ ಬೀರಿದೆ.
ಮಂಗಳವಾರ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ IPL T20 ಹಣಾಹಣಿಯಲ್ಲಿ ಧೋನಿ ಪಡೆಯನ್ನು ಭರ್ಜರಿಯಾಗಿ ಮಣಿಸಿದ ಸ್ಮಿತ್ ಬಾಯ್ಸ್ ವಿಜಯ ಸಾಧಿಸಿದ್ದಾರೆ.
ರಾಜಸ್ಥಾನ ರಾಯಲ್ಸ್ ನೀಡಿದ 217 ರನ್ ಗಳ ಕಠಿಣ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು 200 ರನ್ ಗಳಿಸಲು ಶಕ್ತವಾಯಿತು. ಆ ಮೂಲಕ 17 ರನ್ ಗಳಿಂದ ರಾಯಲ್ಸ್ ಗೆ ಶರಣಾಯಿತು.
ಭಾರೀ ಮೊತ್ತವನ್ನು ಬೆನ್ನಟ್ಟಲಾರಂಭಿಸಿದ ಚೆನ್ನೈಗೆ ಮುರಳಿ ವಿಜಯ್ (21) ಹಾಗೂ ಶೇನ್ ವಾಟ್ಸನ್ (33) ಉತ್ತಮ ಆರಂಭ ಒದಗಿಸಿದರು. ಪ್ರಥಮ ವಿಕೆಟ್ ಜೊತೆಯಾಟದಲ್ಲಿ 56 ರನ್ ಲಭಿಸಿತು. ಆದರೆ, 2 ರನ್ ಗಳ ಅಂತರದಲ್ಲಿ ವಿಜಯ್ ಮತ್ತು ವಾಟ್ಸನ್ ಔಟಾದರು.
ರಾಜಸ್ಥಾನ ರಾಯಲ್ಸ್’ಗೆ ಅಮೋಘ ಜಯ
Follow Us