newsics.com
ಶಾರ್ಜಾ: ರಾಜಸ್ಥಾನ ರಾಯಲ್ಸ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಭಾರೀ ಮೊತ್ತದ ಐಪಿಎಲ್ ಪಂದ್ಯದಲ್ಲಿ ನಾಲ್ಕು ವಿಕೆಟ್ ಗಳಿಂದ ಜಯ ಸಾಧಿಸಿದೆ.
ಕಿಂಗ್ಸ್ ಇಲೆವೆನ್ ಪಂಜಾಬ್ ನೀಡಿದ 224 ರನ್’ಗಳ ಗುರಿಯನ್ನು ಸಮರ್ಥವಾಗಿ ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ವೀರೋಚಿತ ಗೆಲುವು ಸಾಧಿಸಿದೆ. ಈ ಮೂಲಕ ತಾನಾಡಿದ ಎರಡೂ ಪಂದ್ಯಗಳನ್ನು ಗೆದ್ದಿದೆ. ಪಂಜಾಬ್ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಸೋತಿದೆ.
ರಾಜಸ್ಥಾನದ ಪರ ಸ್ಟೀವನ್ ಸ್ಮಿತ್ 27 ಎಸೆತಗಳಲ್ಲಿ 50, ಸಂಜು ಸ್ಯಾಮ್ಸನ್ 42 ಎಸೆತಗಳಲ್ಲಿ 85 ಹಾಗೂ ರಾಹುಲ್ ತಿವಾಟಿಯ 31 ಎಸೆತಗಳಲ್ಲಿ 53 ರನ್ ಸಿಡಿಸಿದರು. ಪಂಜಾಬ್ ಪರ ಮುಹಮ್ಮದ್ ಶಮಿ ಮೂರು ವಿಕೆಟ್ ಪಡೆದರು. ಸ್ಮಿತ್ (50) ಹಾಗೂ ಸಂಜು ಸ್ಯಾಮ್ಸನ್ (85) ಸ್ಪೋಟಕ ಆಟ ನೆರವಾಯಿತು. ಆದರೆ ಯುವ ಲೆಫ್ಟ್ ಹ್ಯಾಂಡರ್ ರಾಹುಲ್ ತೆವಾಟಿಯಾ ರಾಯಲ್ಸ್ ಗೆಲುವನ್ನು ಖಚಿತಗೊಳಿಸಿದರು. ಆದರೆ ಎರಡೂ ತಂಡಕ್ಕೆ ಈ ಪಂದ್ಯ ಗೆಲ್ಲುವ ಭರವಸೆ ಸಮನಾಗಿಯೇ ಇತ್ತು. 18ನೇ ಓವರಿನಲ್ಲಿ ಕಾಟ್ರೆಲ್ ಬೌಲಿಂಗ್ ನಲ್ಲಿ ತೆವಾಟಿಯಾ ಬಾರಿಸಿದ ಆ 5 ಸಿಕ್ಸರ್ ಪಂದ್ಯದ ಗತಿಯನ್ನೇ ಬದಲಿಸಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ್ದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವು ಮಯಾಂಕ್ ಅಗರವಾಲ್ ಭರ್ಜರಿ ಶತಕದ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿತ್ತು. ಮಯಾಂಕ್ ಕೇವಲ 50 ಎಸೆತಗಳಲ್ಲಿ 106 ರನ್ (10 ಬೌಂಡರಿ, 6 ಸಿಕ್ಸ್) ಗಳಿಸಿ ಮಿಂಚಿದರು.
ಪಂಜಾಬ್ ವಿರುದ್ಧ ರಾಜಸ್ಥಾನ ರಾಯಲ್ಸ್’ಗೆ ವೀರೋಚಿತ ಗೆಲುವು
Follow Us