Saturday, February 27, 2021

ರಜನಿಕಾಂತ್ ತುಸು ಚೇತರಿಕೆ, ರಕ್ತದೊತ್ತಡ ಯಥಾಸ್ಥಿತಿ

newsics.com
ಚೆನ್ನೈ: ಅನಾರೋಗ್ಯದ ಕಾರಣ ಶುಕ್ರವಾರ ಹೈದರಾಬಾದ್‌ನ ಅಪೊಲೋ ಆಸ್ಪತ್ರೆಗೆ ದಾಖಲಾಗಿರುವ ಸೂಪರ್‌ಸ್ಟಾರ್ ರಜನಿಕಾಂತ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಆರೋಗ್ಯ ಸುಧಾರಿಸುತ್ತಿದೆ, ಆದರೆ ರಕ್ತದೊತ್ತಡ ಅದೇ ಮಟ್ಟದಲ್ಲಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಈ ಸಂಬಂಧ ಅಪೊಲೋ ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ. ರಕ್ತದೊತ್ತಡ ನಿಯಂತ್ರಿಸಲು ಚಿಕಿತ್ಸೆ ನೀಡಲಾಗುತ್ತಿದ್ದು, ಬಿಪಿ ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ ಎಂದು ತಿಳಿಸಿದೆ.
ಖ್ಯಾತ ನಟ ಆಸ್ಪತ್ರೆಗೆ ದಾಖಲಾದ ಬಳಿಕ ವೈದ್ಯರ ತಂಡ ಸೂಕ್ಷ್ಮವಾಗಿ ರಜನಿ ಅವರ ಆರೋಗ್ಯವನ್ನು ಮೇಲ್ವಿಚಾರಣೆ ಮಾಡುತ್ತಿದೆ. ರಕ್ತದೊತ್ತಡವನ್ನು ನಿಯಂತ್ರಿಸಲು ಸೂಕ್ತ ಔಷಧೋಪಚಾರ ನೀಡಲಾಗುತ್ತಿದೆ. ರಜನೀಕಾಂತ್ ರಾತ್ರಿಯಿಡೀ ಆಸ್ಪತ್ರೆಯಲ್ಲಿ ವೈದ್ಯರ ಮೇಲ್ವಿಚಾರಣೆಯಲ್ಲಿಯೇ ಇದ್ದರು ಎಂದು ಆಸ್ಪತ್ರೆ ಆಡಳಿತ ಮಾಹಿತಿ ನೀಡಿದೆ.
ನಿನ್ನೆಗಿಂತ ಇಂದು ರಕ್ತದೊತ್ತಡ ಪ್ರಮಾಣದಲ್ಲಿ ಇನ್ನೂ ಸ್ವಲ್ಪ ಕಡಿಮೆಯಾಗಿದೆ ಎಂದು ಆಸ್ಪತ್ರೆ ತಿಳಿಸಿದೆ. ರಜನೀಕಾಂತ್ ಅವರಿಗೆ ರಕ್ತದೊತ್ತಡ ಸ್ಥಿರವಾಗುವವರೆಗೆ ಆಸ್ಪತ್ರೆಯಲ್ಲಿಯೇ ಅವರನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ. ರಕ್ತದೊತ್ತಡ, ದಣಿವಿನ ಹೊರತಾಗಿ ಅವರಿಗೆ ಬೇರೆ ಯಾವುದೇ ರೋಗಲಕ್ಷಣಗಳಿಲ್ಲ ಎಂದು ಹೇಳಿದೆ.

ಮತ್ತಷ್ಟು ಸುದ್ದಿಗಳು

Latest News

ಸಹೋದರಿಯನ್ನು ಚುಡಾಯಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ಚೂರಿಯಿಂದ ಇರಿತ

Newsics.com ನವದೆಹಲಿ: ಸಹೋದರಿಗೆ ಕಿರುಕುಳ ನೀಡುತ್ತಿರುವುದನ್ನು ಪ್ರಶ್ನಿಸಿದ್ದಕ್ಕೆ 17 ವರ್ಷ ಪ್ರಾಯದ ಹುಡುಗನಿಗೆ ದುಷ್ಕರ್ಮಿಗಳು ಚೂರಿಯಿಂದ ಇರಿದಿದ್ದಾರೆ. ಗಂಭೀರ ಹಲ್ಲೆ ನಡೆಸಿದ್ದಾರೆ. ದೆಹಲಿಯ ಕಲ್ಕಾಜಿ ಪ್ರದೇಶದಲ್ಲಿ ಈ ಘಟನೆ...

20 ರೂಪಾಯಿ ದಕ್ಷಿಣೆ ಪಡೆದ ಮುಖ್ಯ ಅರ್ಚಕ ಅಮಾನತು

newsics.com ಕೊಚ್ಚಿ: ಕೇರಳದ ದೇವಸ್ಥಾನವೊಂದರಲ್ಲಿ 20 ರೂಪಾಯಿ ದಕ್ಷಿಣೆ ಪಡೆದ ಮುಖ್ಯ ಅರ್ಚಕರೊಬ್ಬರನ್ನು ಅಮಾನತು ಮಾಡಲಾಗಿದೆ. ದೇವಸ್ಥಾನ ಆಡಳಿತ ಮಂಡಳಿಯ ನೀತಿಗೆ  ವಿರುದ್ದವಾಗಿ ಅರ್ಚಕರು ಹಣ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ಕೊಚ್ಚಿ ಸಮೀಪದ ಮಾಚಾಡ್ ತಿರುವಣ್ಣಿಕಾವ್ ದೇವಸ್ಥಾನದಲ್ಲಿ...

ಜಲ್ಲಿಕಟ್ಟು ವೇಳೆ ಅನಾಹುತ: ನಾಲ್ಕು ಮಂದಿ ಸಾವು

newsics.com ಚೆನ್ನೈ: ತಮಿಳುನಾಡಿನಲ್ಲಿ ಜಲ್ಲಿಕಟ್ಟು ಸ್ಪರ್ಧೆ ವೇಳೆ ಮತ್ತೊಮ್ಮೆ ದುರಂತ ಸಂಭವಿಸಿದೆ.ಶಿವಗಂಗಾ ಜಿಲ್ಲೆಯ ಅರಲಿಪಾರಯಿ ಗ್ರಾಮದಲ್ಲಿ ಹೋರಿ ಬೆದರಿಸುವ ವೇಳೆ ನಾಲ್ಕು ಮಂದಿ ಸಾವನ್ನಪ್ಪಿದ್ದಾರೆ. 90ಕ್ಕೂ ಹೆಚ್ಚು ಮಂದಿಗೆ ಗಾಯಗಳಾಗಿವೆ ಸ್ಥಳೀಯ ದೇವಸ್ಥಾನದ ಉತ್ಸವದ ಅಂಗವಾಗಿ...
- Advertisement -
error: Content is protected !!