newsics.com
ಮುಂಬೈ: ಮಾದಕ ದ್ರವ್ಯ ನಿಯಂತ್ರಣ ಬ್ಯೂರೋದ ಸಮನ್ಸ್’ಗೆ ಕೊನೆಗೂ ನಟಿ ರಕುಲ್ ಪ್ರೀತ್ ಸಿಂಗ್ ಸ್ಪಂದಿಸಿದ್ದಾರೆ. ಸಮನ್ಸ್ ಸ್ವೀಕೃತಿಯಾಗಿರುವುದನ್ನು ಅವರು ಇದೀಗ ದೃಢೀಕರಿಸಿದ್ದಾರೆ. ಇದಕ್ಕೂ ಮೊದಲು ಬುಧವಾರದಿಂದ ಅವರನ್ನು ಸಂಪರ್ಕಿಸಲು ನಡೆಸಿದ ಎಲ್ಲ ಪ್ರಯತ್ನ ವಿಫಲವಾಗಿತ್ತು ಎಂದು ಎನ್ ಸಿ ಬಿ ಹೇಳಿತ್ತು.
ಈ ಮಧ್ಯೆ, ಸೆಪ್ಟೆಂಬರ್ 25ರ ತನಕ ತಮ್ಮಗೆ ವಿಚಾರಣೆಯಿಂದ ವಿನಾಯಿತಿ ನೀಡಬೇಕು ಎಂದು ದೀಪಿಕಾ ಪಡುಕೋಣೆ ಅವರ ಮ್ಯಾನೇಜರ್ ಕರಿಶ್ಮಾ ಪ್ರಕಾಶ್ ಮನವಿ ಮಾಡಿದ್ದಾರೆ. ಅಸೌಖ್ಯದಿಂದ ಬಳಲುತ್ತಿದ್ದು ತಮ್ಮ ಮನವಿ ಪರಿಗಣಿಸಬೇಕು ಎಂದು ಅವರು ವಿನಂತಿಸಿಕೊಂಡಿದ್ದಾರೆ.
ನಾಳೆ ವಿಚಾರಣೆಗೆ ಹಾಜರಾಗುವಂತೆ ದೀಪಿಕಾ ಪಡುಕೋಣೆ ಅವರಿಗೆ ಎನ್ ಸಿ ಬಿ ಸೂಚಿಸಿದೆ.