ಹೈದರಾಬಾದ್: ‘ಪವರ್ ಸ್ಟಾರ್’ ಸಿನಿಮಾ ನಿರ್ಮಾಣ ವಿರುದ್ಧ ಪವನ್ ಕಲ್ಯಾಣ್ ಅವರ ಸ್ವಯಂಘೋಷಿತ ಅಭಿಮಾನಿಗಳು ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ಅವರ ಕಚೇರಿ ಮೇಲೆ ದಾಳಿ ನಡೆಸಿ ಪೀಠೋಪಕರಣಗಳನ್ನು ಧ್ವಂಸಗೊಳಿಸಿರುವ ಘಟನೆ ಹೈದರಾಬಾದ್’ನಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.ವರ್ಮಾ ಅವರ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿ, ಕಿಟಕಿ ಗಾಜು ಪುಡಿಗೈದಿದ್ದಾರೆ. ರಾಮ್ ಗೋಪಾಲ್ ವರ್ಮಾ ಅವರು ‘ಪವರ್ ಸ್ಟಾರ್’ ಹೆಸರಿನ ಸಿನಿಮಾ ನಿರ್ಮಾಣ ಮಾಡುತ್ತಿರುವುದರ ವಿರುದ್ಧ ಪವನ್ ಕಲ್ಯಾಣ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ‘ಪವರ್ ಸ್ಟಾರ್’ ಸಿನಿಮಾ ಪವನ್ ಕಲ್ಯಾಣ್ ಅವರ 2019ರ ರಾಜಕೀಯ ಸೋಲಿನ ಕಥಾಹಂದರವನ್ನು ಹೊಂದಿದೆ ಎಂದು ಹೇಳಲಾಗಿದೆ. ಪವರ್ ಸ್ಟಾರ್ ಸಿನಿಮಾ ಘೋಷಿಸಿದ ದಿನದಿಂದಲೇ ಪವನ್ ಕಲ್ಯಾಣ್ ಅಭಿಮಾನಿಗಳು ಎನ್ನಲಾದ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ರಾಮ್ ಗೋಪಾಲ್ ವರ್ಮಾ ಅವರನ್ನು ಕಟುವಾಗಿ ಟೀಕಿಸಲಾರಂಭಿಸಿದ್ದರು ಎಂದು ವರದಿಗಳು ವಿವರಿಸಿವೆ. ಪವರ್ ಸ್ಟಾರ್ ಸಿನಿಮಾವನ್ನು ಆರ್ ಜಿವಿ ವರ್ಲ್ಡ್’ನಲ್ಲಿ ಬಿಡುಗಡೆ ಮಾಡುವುದಾಗಿ ವರ್ಮಾ ಘೋಷಿಸಿದ್ದಾರೆ. ಪವರ್ ಸ್ಟಾರ್ ಸಿನಿಮಾ ಟ್ರೈಲರ್ ಈಗಾಗಲೇ ಯೂಟ್ಯೂಬ್’ನಲ್ಲಿ ಟ್ರೆಂಡಿಂಗ್ ಆಗಿದ್ದು, 35 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.
ರಾಮ್ ಗೋಪಾಲ್ ವರ್ಮಾ ಕಚೇರಿ ಮೇಲೆ ದಾಳಿ
Follow Us