ನವದೆಹಲಿ: ಅಯೋಧ್ಯೆಯ ರಾಮಜನ್ಮಭೂಮಿ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿದ್ದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸೋಮವಾರ ವಜಾಗೊಳಿಸಿರುವ ಸುಪ್ರೀಂ ಕೋರ್ಟ್, ಈ ಸಂಬಂಧ ಅರ್ಜಿದಾರರಿಗೆ ತಲಾ ₹ 1 ಲಕ್ಷ ದಂಡ ವಿಧಿಸಿದೆ.
ಒಂದು ತಿಂಗಳೊಳಗೆ ದಂಡ ಪಾವತಿಸುವಂತೆ ಅರ್ಜಿದಾರರಿಗೆ ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ಬಿ.ಆರ್.ಗವಾಯಿ ಮತ್ತು ಕೃಷ್ಣನ್ ಮುರಾರಿ ಅವರ ಪೀಠ ಸೂಚಿಸಿದೆ.
ಐವರು ನ್ಯಾಯಮೂರ್ತಿಗಳ ಪೀಠ ಈಗಾಗಲೇ ರಾಮಜನ್ಮಭೂಮಿ ಸಂಬಂಧ ತೀರ್ಪನ್ನು ನೀಡಿದೆ. ಅರ್ಜಿಗಳು ಈ ತೀರ್ಪನ್ನು ಪ್ರಶ್ನಿಸುವಂತಿವೆ. ಇವು ಗಂಭೀರವಲ್ಲದ ‘ಕ್ಷುಲ್ಲಕ’ ಅರ್ಜಿಗಳು ಎಂದೂ ಹೇಳಿದೆ. ರಾಮಜನ್ಮಭೂಮಿ ಟ್ರಸ್ಟ್ ಕಲಾಕೃತಿ ಮತ್ತು ದೊರೆತ ವಸ್ತುಗಳನ್ನು ರಕ್ಷಿಸುವುದಾಗಿ ಹೇಳಿದೆ. ಆದರೂ, ಅರ್ಜಿದಾರರು ಸಂವಿಧಾನದ 32ನೇ ವಿಧಿಯನ್ವಯ ಕೋರ್ಟ್ ಮುಂದೆ ಬಂದಿರುವುದು ಏಕೆ ಎಂದು ಪೀಠ ಪ್ರಶ್ನಿಸಿತು. ಅಯೋಧ್ಯೆಯಲ್ಲಿ ದೊರೆತ ವಸ್ತುಗಳನ್ನು ಸಂರಕ್ಷಿಸುವಂತೆ ಭಾರತೀಯ ಪುರಾತತ್ವ ಇಲಾಖೆಗೆ ನಿರ್ದೇಶನ ನೀಡಬೇಕು ಅರ್ಜಿದಾರರಾದ ಸತೀಶ್ ಚಿಂದೂಜಿ ಶಂಭರ್ಕರ್ ಮತ್ತು ಡಾ.ಅಂಬೇಡ್ಕರ್ ಫೌಂಡೇಶನ್ ನ್ಯಾಯಾಲಯವನ್ನು ಕೋರಿದ್ದರು.
ರಾಮಜನ್ಮಭೂಮಿ ವಿಚಾರ; 2 ಪಿಐಎಲ್ ವಜಾಗೊಳಿಸಿದ ಸುಪ್ರೀಂ, ತಲಾ ಲಕ್ಷ ರೂ. ದಂಡ
Follow Us