ಐತಿಹಾಸಿಕ ರಾಮಮಂದಿರ ನಿರ್ಮಾಣಕ್ಕೆ ಅಗಸ್ಟ್ 5 ರಂದು ಭೂಮಿಪೂಜೆ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಬೆಳ್ಳಿ ಇಟ್ಟಿಗೆಗಳನ್ನು ಇಡುವ ಅಡಿಗಲ್ಲು ಸಮಾರಂಭ ನೆರವೇರಿಸಲಿದ್ದಾರೆ.
ಆದರೆ ಕೊರೋನಾದಿಂದ ಈ ಸಮಾರಂಭಕ್ಕೆ ಹೆಚ್ಚಿನ ಜನರ ಪಾಲ್ಗೊಳ್ಳುವಿಕೆಯ ಮೇಲೆ ನಿರ್ಬಂಧ ಹೇರಲಾಗಿದೆ. ಆದರೆ ನೀವು ಐತಿಹಾಸಿಕ ಭೂಮಿಪೂಜೆ ಸಮಾರಂಭವನ್ನು ಮನೆಯಲ್ಲೇ ಕುಳಿತು ಕಣ್ತುಂಬಿಕೊಳ್ಳಬಹುದಾಗಿದೆ. ದೂರದರ್ಶನ ಇಂತಹದೊಂದು ಅಪರೂಪದ ಅವಕಾಶ ಕಲ್ಪಿಸಿದ್ದು, ರಾಮಮಂದಿರ ಶಂಕುಸ್ಥಾಪನೆಯ ಸಮಾರಂಭವನ್ನು ದೂರದರ್ಶನ ನೇರಪ್ರಸಾರ ಮಾಡಲಿದೆ.
ಅಗಸ್ಟ್ 5 ರಂದು ಮಧ್ಯಾಹ್ನ 12.30ಕ್ಕೆ ಶಂಕುಸ್ಥಾಪನೆಗೆ ಮುಹೂರ್ತ ನಿಗದಿಪಡಿಸಲಾಗಿದ್ದು, ಶಂಕುಸ್ಥಾಪನೆಯ ದಿನ ಹಿಂದೂ ಧರ್ಮದ ಪಂಚತತ್ವಗಳ ಸಂಕೇತವಾಗಿ ಒಟ್ಟು 40 ಕೆಜಿ ತೂಕದ ಬೆಳ್ಳಿ ಇಟ್ಟಿಗೆಗಳನ್ನು ಸಮರ್ಪಿಸಲಾಗುತ್ತದೆ.
ಶ್ರೀರಾಮಮಂದಿರ ಟ್ರಸ್ಟ್ ರಾಮಮಂದಿರ ನಿರ್ಮಾಣದ ಹೊಣೆ ಹೊತ್ತಿದ್ದು, ಕಾರ್ಯಕ್ರಮಕ್ಕೆ ಎಲ್ಲಾ ರಾಜ್ಯಗಳ ಸಿಎಂ, ಬಿಜೆಪಿ ಹಿರಿಯ ನಾಯಕರು ಹಾಗೂ ಕೆಲ ಕೇಂದ್ರ ಸಚಿವರನ್ನು ಆಹ್ವಾನಿಸಲು ನಿರ್ಧರಿಸಿದೆ.
ರಾಮ ಮಂದಿರ ಭೂಮಿಪೂಜೆ ಮನೆಯಲ್ಲೇ ನೋಡಿ
Follow Us