newsics.com
ಮುಂಬೈ: ಕಿರುತೆರೆಯಲ್ಲಿ ಇತಿಹಾಸ ಸೃಷ್ಟಿಸಿದ್ದ ರಾಮಾಯಣ ಧಾರವಾಹಿಯಲ್ಲಿ ರಾವಣನಾಗಿ ನಟಿಸಿದ್ದ ಅರವಿಂದ ತ್ರಿವೇದಿ(82) ಇನ್ನಿಲ್ಲ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಅಸು ನೀಗಿದ್ದಾರೆ.
ರಮಾನಂದ ಸಾಗರ್ ನಿರ್ದೇಶಿಸಿದ್ದ ರಾಮಾಯಣ ಧಾರವಾಹಿಯಲ್ಲಿ ಅರವಿಂದ ತ್ರಿವೇದಿ ರಾವಣನಾಗಿ ಅಭಿನಯಿಸಿದ್ದರು. ಈ ಮೂಲಕ ಅವರು ಮನೆ ಮಾತಾಗಿದ್ದರು.
ವೃತ್ತಿಯಲ್ಲಿ ವಕೀಲರಾಗಿದ್ದ ಅರವಿಂದ ತ್ರಿವೇದಿ 1991ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಲೋಕಸಭೆಗೆ ಆಯ್ಕೆಯಾಗಿದ್ದರು. ಅರವಿಂದ ತ್ರಿವೇದಿ ಅವರ ನಿಧನಕ್ಕೆ ಗಣ್ಯರು ಕಂಬನಿ ಮಿಡಿದಿದ್ದಾರೆ.