ಬಾಲಕಿಯರನ್ನು ಒತ್ತೆಯಲ್ಲಿರಿಸಿ ಅತ್ಯಾಚಾರ: ನಾಲ್ಕು ಆರೋಪಿಗಳ ಬಂಧನ

Newsics.com ಪುದುಚೇರಿ: ಬಾಲಕಿಯರನ್ನು ಒತ್ತೆಸೆರೆಯಲ್ಲಿರಿಸಿ ಅತ್ಯಾಚಾರ ಎಸಗಿದ ಘಟನೆ ಪುದುಚೇರಿಯಲ್ಲಿ ಸಂಭವಿಸಿದೆ. 4 ಆರೋಪಿಗಳ ವಿರುದ್ದ ಪೋಕ್ಸೊದಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಾಲಕಿಯರನ್ನು ಅಪಹರಿಸಿದ್ದ ದುಷ್ಕರ್ಮಿಗಳು ಅವರನ್ನು ಒತ್ತೆಸೆರೆಯಲ್ಲಿರಿಸಿ ಈ ನೀಚ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ  ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.  ಈ ಘಟನೆಗೆ ಪುದುಚೇರಿಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಆರೋಪಿಗಳ ಬಂಧನಕ್ಕೆ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ. ಆರೋಪಿಗಳು ಪುದುಚೇರಿಯಿಂದ ಪಲಾಯನ ಮಾಡಿರುವ ಶಂಕೆ ಕೂಡ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ … Continue reading ಬಾಲಕಿಯರನ್ನು ಒತ್ತೆಯಲ್ಲಿರಿಸಿ ಅತ್ಯಾಚಾರ: ನಾಲ್ಕು ಆರೋಪಿಗಳ ಬಂಧನ