newsics.com
ಗುರುಗ್ರಾಮ: ಸಾಮಾಜಿಕ ಜಾಲ ತಾಣ ಇನ್ ಸ್ಟಾ ಗ್ರಾಮ್ ನಲ್ಲಿ ಪರಿಚಯವಾದ 16 ವರ್ಷದ ಅಪ್ರಾಪ್ತೆ ಮೇಲೆ ಆರೋಪಿ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಗುರು ಗ್ರಾಮದ ಹೋಟೆಲ್ ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿ, ಅಶ್ಲೀಲ ದೃಶ್ಯಗಳನ್ನು ಸಂತ್ರಸ್ತೆಯ ತಾಯಿಗೆ ಕಳುಹಿಸಿದ್ದ ಎಂದು ವರದಿಯಾಗಿದೆ.
ಈ ಸಂಬಂಧ ರಾಜ್ ದ್ವಿವೇದಿ ಎಂಬ ಆರೋಪಿ ವಿರುದ್ದ ಪೊಕ್ಸೋ ಕಾನೂನಿನ ಅಡಿ ಪ್ರಕರಣ ದಾಖಲಿಸಲಾಗಿದೆ.
ಸಂತ್ರಸ್ತೆಯ ನಗ್ನ ಚಿತ್ರ ಸೆರೆ ಹಿಡಿದಿದ್ದ ಆರೋಪಿ ಅದನ್ನು ಮುಂದಿಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.