newsics.com
ದುಬೈ: ಡೆಲ್ಲಿ ವಿರುದ್ಧ ರಾಯಲ್ ಚಾಲೆಂಜರ್ಸ್ ತಂಡ 7 ವಿಕೆಟ್ಗಳ ರೋಚಕ ಜಯ ಸಾಧಿಸಿದೆ.
ಕೊನೆಯ ಎಸೆತದಲ್ಲಿ ಶ್ರೀಕರ್ ಭರತ್ ಸಿಕ್ಸ್ ಸಿಡಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಈ ಗೆಲುವನ್ನು ತನ್ನದಾಗಿಸಿಕೊಂಡಿತು.
ಗೆಲ್ಲಲು 165 ರನ್ಗಳ ಸವಾಲು ಪಡೆದ ಆರ್ಸಿಬಿ 20 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು 166 ರನ್ ಮೂಲಕ ಈ ಜಯ ಗಳಿಸಿತು. ಶ್ರೀಕರ್ ಭರತ್ 78 ರನ್(52 ಎಸೆತ, 3 ಬೌಂಡರಿ, 4 ಸಿಕ್ಸರ್), ಮ್ಯಾಕ್ಸ್ವೆಲ್ 51 ರನ್(33 ಎಸೆತ, 8 ಬೌಂಡರಿ) ಹೊಡೆದರು. ಎಬಿಡಿ 26 ರನ್ಗಳಿಸಿ ಔಟಾದರು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಪೃಥ್ವಿ ಶಾ 48 ರನ್(31 ಎಸೆತ, 4 ಬೌಂಡರಿ, 2 ಸಿಕ್ಸರ್) ಶಿಖರ್ ಧವನ್ 43 ರನ್(35 ಎಸೆತ, 3 ಬೌಂಡರಿ,2 ಸಿಕ್ಸರ್) ಹೆಟ್ಮೆಯರ್ 29 ರನ್(22 ಎಸೆತ, 2 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರು. ಸಿರಾಜ್ 2 ವಿಕೆಟ್ ಪಡೆದರೆ ಚಹಲ್, ಹರ್ಷಲ್ ಪಟೇಲ್, ಕ್ರಿಸ್ಟಿಯನ್ ತಲಾ ಒಂದೊಂದು ವಿಕೆಟ್ ಪಡೆದರು.