newsics.com
ಒಂದೇ ದಿನದಲ್ಲಿ ಕನ್ನಡದ 17 ಹಾಡುಗಳ ರೆಕಾರ್ಡ್ ಮಾಡಿದ ಏಕೈಕ ಕಲಾವಿದ ಎಸ್.ಪಿ.ಬಿ. ಅಷ್ಟೇ ಅಲ್ಲ, ಒಂದೇ ದಿನದಲ್ಲಿ ತೆಲುಗು ಹಾಗೂ ತಮಿಳಿನಲ್ಲಿ 19 ಹಾಡುಗಳನ್ನು ಹಾಡಿದ್ದರು. ಹಿಂದಿ ಭಾಷೆಯಲ್ಲಿ ಒಂದೇ ದಿನ 16 ಹಾಡುಗಳನ್ನು ರೆಕಾರ್ಡ್ ಮಾಡಿದ ಹಿನ್ನೆಲೆ ಗಾಯಕ ಎಂದರೆ ಎಸ್. ಪಿ. ಬಾಲಸುಬ್ರಹ್ಮಣ್ಯಂ.
ಸಂಗೀತ ತಂಡ ಕಟ್ಟಿದ್ದ ಎಸ್.ಪಿ.ಬಿ.
ಅನೇಕರಿಗೆ ಗೊತ್ತಿರಲಿಕ್ಕಿಲ್ಲ, ಎಸ್.ಪಿ.ಬಿ. ಅವರು ಅನೇಕ ವರ್ಷಗಳ ಕಾಲ ಸಂಗೀತ ತಂಡವೊಂದರ ಮುಖ್ಯಸ್ಥರಾಗಿದ್ದರು. ಅದರಲ್ಲಿ ಹಾರ್ಮೋನಿಯಂಗೆ ಅನಿರುತ್ತ ಅವರಿದ್ದರೆ, ಗಿಟಾರ್ ಮತ್ತು ಪರ್ಕಷನ್ ಗೆ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜಾ ಇದ್ದರು! ಅದಿನ್ನೂ ಇಳಯರಾಜಾ ಅವಕಾಶಗಳಿಗಾಗಿ ಹುಡುಕುತ್ತಿದ್ದ ಸಮಯ. ಮುಂದೆ ಚಿತ್ರರಂಗದಲ್ಲಿ ಬೆಳೆದ ಬಳಿಕವೂ ಇಳಯರಾಜಾ ಜತೆಗಿನ ಸಂಬಂಧ ಹಾಗೆಯೇ ಉಳಿದಿತ್ತು, ಬೆಳೆದಿತ್ತು. ಅಸಲಿಗೆ, ಇಳಯರಾಜಾ ಸಂಗೀತ ನಿರ್ದೇಶನದ ಬಹುತೇಕ ಎಲ್ಲ ಹಾಡುಗಳನ್ನೂ ಎಸ್.ಪಿ.ಬಿ ಅವರೇ ಹಾಡಿದ್ದಾರೆ. ಇಂಥದ್ದೇ ಸಾಂಗತ್ಯವನ್ನೂ ಆರ್.ರೆಹಮಾನ್ ಅವರೊಂದಿಗೂ ಕಾಣಬಹುದು. ಇವರಿಬ್ಬರೊಂದಿಗೆ ಸೇರಿ “ಸಾಗರ ಸಂಗಮಂ’, “ರುದ್ರವೀಣಾ’, “ಚಿನ್ನಮಣಿ ಪೂವೆ’, “ಮಲೈಯೊರಮ್ ವೀಸುಮ್ ಕಾತ್ರು’ ಸೇರಿದಂತೆ ಹಲವಾರು ತೆಲುಗು, ತಮಿಳು ಚಿತ್ರಗಳಲ್ಲಿ ಹಾಡಿದ ಹಾಡುಗಳು ಸರ್ವಶ್ರೇಷ್ಠ ಹಾಡುಗಳಾಗಿವೆ. ಅಷ್ಟೇ ಅಲ್ಲ, ಕನ್ನಡದ “ಪಲ್ಲವಿ ಅನುಪಲ್ಲವಿ, “ಅಮೃತವರ್ಷಿಣಿ’, ಹಿಂದಿಯ “ರೋಜಾ’ ಮುಂತಾದ ಚಿತ್ರಗಳು ಇದೇ ಸಾಲಿಗೆ ಸೇರುತ್ತವೆ.
ಪ್ರಶಸ್ತಿಗಳು
ಚಿತ್ರಗೀತೆಗಳ ಜತೆಗೆ ಹಾಡಿದ ದೇವರನಾಮ, ಭಾವಗೀತೆಗಳಿಗೆ ಲೆಕ್ಕವಿಲ್ಲ. ಇದರೊಂದಿಗೆ ಕಿರುತೆರೆಯಲ್ಲಿ ಸಾವಿರಾರು ಎಪಿಸೋಡುಗಳನ್ನು ನಡೆಸಿಕೊಟ್ಟಿದ್ದಾರೆ. ಅವರ ನೇತೃತ್ವದ ಕನ್ನಡದ “ಎದೆತುಂಬಿ ಹಾಡಿದೆನು’ ಜನಪ್ರಿಯತೆ ಹೊಂದಿತ್ತು. ಅವರಿಗೆ ಸಂದ ಪ್ರಶಸ್ತಿಗಳು ಅನೇಕ. ಪದ್ಮಶ್ರೀ, ಪದ್ಮಭೂಷಣ, ಆರು ರಾಷ್ಟ್ರ ಪ್ರಶಸ್ತಿಗಳು, ಕರ್ನಾಟಕ, ಆಂಧ್ರ, ತಮಿಳುನಾಡು ರಾಜ್ಯ ಸರ್ಕಾರಗಳಿಂದ ಒಟ್ಟು 23 ಪ್ರಶಸ್ತಿಗಳು ಬಂದಿವೆ. ನಾಲ್ಕು ವಿಶ್ವವಿದ್ಯಾನಿಲಯಗಳಿಂದ ನಾಲ್ಕು ಡಾಕ್ಟರೇಟ್ ಗೌರವಕ್ಕೂ ಪಾತ್ರರಾಗಿದ್ದರು.
ದಾಖಲೆಯ ಸರದಾರ SPB
Follow Us