ತಿರುವನಂತಪುರಂ: ಕೇರಳದಲ್ಲಿ ಮೊದಲ ಬಾರಿಗೆ ಒಂದೇ ದಿನ 5000 ಕೊರೋನಾ ಪ್ರಕರಣ ವರದಿಯಾಗಿದೆ. ಕೇರಳದಲ್ಲಿ ಬುಧವಾರ 5376 ಕೊರೋನಾ ಪ್ರಕರಣ ವರದಿಯಾಗಿದೆ. ಇದು ಇದುವರೆಗೆ ಕೇರಳದಲ್ಲಿ ದಾಖಲಾದ ಅತ್ಯಧಿಕ ಕೊರೋನಾ ಪ್ರಕರಣವಾಗಿದೆ.
ಕಾಸರಗೋಡಿನಲ್ಲಿ ಹೊಸದಾಗಿ 136 ಕೊರೋನಾ ಪ್ರಕರಣ ವರದಿಯಾಗಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ರೋಗ ವ್ಯಾಪಕವಾಗಿದೆ. ಬುಧವಾರ ಕೇರಳದಲ್ಲಿ ಕೊರೋನಾಕ್ಕೆ 20 ಮಂದಿ ಬಲಿಯಾಗಿದ್ದಾರೆ.
ಇದೇ ವೇಳೆ ಒಂದೇ ದಿನ ಕೊರೋನಾ ಸೋಂಕಿತರಾಗಿದ್ದ 2951 ಮಂದಿ ಗುಣಮುಖರಾಗಿದ್ದಾರೆ