ಮುಂಬೈ: ಸೆಪ್ಟೆಂಬರ್ 19ರಂದು ನಡೆದ ಐಪಿಎಲ್ ಉದ್ಘಾಟನಾ ಪಂದ್ಯವನ್ನು ದಾಖಲೆ ಮಂದಿ ವೀಕ್ಷಿಸಿದ್ದಾರೆ. 20 ಕೋಟಿ ಜನರು ಈ ಪಂದ್ಯ ವೀಕ್ಷಿಸಿದ್ದಾರೆ ಎಂದು ಬಿಸಿಸಿಐ ಹಕ್ಕು ಮಂಡಿಸಿದೆ. ಬಾರ್ಕ್ ಮೂಲಗಳನ್ನು ಉಲ್ಲೇಖಿಸಿ ಬಿಸಿಸಿಐ ಈ ಹೇಳಿಕೆ ನೀಡಿದೆ.
ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮುಂಬೈ ತಂಡದ ವಿರುದ್ಧ ಜಯಗಳಿಸಿತ್ತು.
ಕೊರೋನಾದ ಕಾರಣ ಈ ಬಾರಿ ಕ್ರೀಡಾಂಗಣದಲ್ಲಿ ಪಂದ್ಯ ವೀಕ್ಷಿಸುವುದರಿಂದ ಪ್ರೇಕ್ಷಕರು ವಂಚಿತರಾಗಿದ್ದಾರೆ. ಇದರಿಂದ ಎಲ್ಲರೂ ಟಿವಿ ಪರದೆಗಳ ಮೇಲೆ ಪಂದ್ಯ ವೀಕ್ಷಿಸುತ್ತಿದ್ದಾರೆ
ಇದೇ ವೇಳೆ,ಚೆನ್ನೈ ಸೂಪರ್ ಕಿಂಗ್ಸ್ ಜತೆ ಅಮೃತಾಂಜನ್ ಸಂಸ್ಥೆ ಕೈ ಜೋಡಿಸಿದೆ. ಇದೇ ಮೊದಲ ಬಾರಿಗೆ ಅಮೃತಾಂಜನ್ ಸಂಸ್ಥೆ ಕ್ರಿಕೆಟ್ ಸಂಸ್ಥೆಯೊಂದಿಗೆ ಕೈ ಜೋಡಿಸಿದೆ.