newsics.com
ಛತ್ತೀಸಗಢ : ಭಾರತೀಯ ರೈಲ್ವೆ ಇಲಾಖೆಯ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ 10 ತಿಂಗಳ ಮಗುವಿಗೆ ನೌಕರಿ ಸಿಕ್ಕಿದೆ. ಈಕೆ 18 ವರ್ಷ ಪೂರ್ಣಗೊಳ್ಳುತ್ತಿದ್ದಂತೆಯೇ ಕರ್ತವ್ಯಕ್ಕೆ ಹಾಜರಾಗಳಿದ್ದಾಳೆ. ಛತ್ತೀಸಗಢದ ಆಗ್ನೇಯ ಕೇಂದ್ರ ರೈಲ್ವೆಯ ರಾಯಪುರ ವಿಭಾಗದಲ್ಲಿ ಇಂತಹದ್ದೊಂದು ನೇಮಕಾತಿ ನಡೆದಿದೆ.
ಮಗು ರಾಧಿಕಾ ತಂದೆ ರಾಜೇಂದ್ರ ಕುಮಾರ್ ಯಾದವ್ ಭಿಲಾಯ್ ಪಿಸಿ ಯಾರ್ಡ್ನಲ್ಲಿ ಸಹಾಯಕನಾಗಿ ಸೇವೆ ಸಲ್ಲಿಸುತ್ತಿದ್ದರು. ಅಪಘಾತದಲ್ಲಿ ರಾಜೇಂದ್ರ ಕುಮಾರ್ ಯಾದವ್ ಹಾಗೂ ಅವರ ಪತ್ನಿ ಮಂಜು ಯಾದವ್ ಮೃತಪಟ್ಟಿದ್ದಾರೆ. ಹೀಗಾಗಿ ಮಗು ಸದ್ಯ ತನ್ನ ಅಜ್ಜಿಯ ಆರೈಕೆಯಲ್ಲಿದೆ.
ಈ ಸಂಬಂಧ ರಾಜೇಂದ್ರ ಪುತ್ರಿ 10 ತಿಂಗಳ ರಾಧಿಕಾಳ ದಾಖಲಾತಿ ಪ್ರಕ್ರಿಯೆಯನ್ನು ಛತ್ತೀಸಗಢದ ಆಗ್ನೇಯ ಕೇಂದ್ರ ರೈಲ್ವೆಯ ರಾಯಪುರ ವಿಭಾಗದಲ್ಲಿ ಪೂರ್ಣಗೊಳಿಸಲಾಗಿದೆ. ರಾಧಿಕಾ ತನಗೆ 18 ವರ್ಷ ತುಂಬಿದ ಬಳಿಕ ಈ ಕೆಲಸಕ್ಕೆ ಹಾಜರಾಗುತ್ತಾಳೆ ಎಂದು ಹಿರಿಯ ವಿಭಾಗೀಯ ಸಿಬ್ಬಂದಿ ಉದಯ್ ಕುಮಾರ್ ಭಾರ್ತಿ ಹೇಳಿದ್ದಾರೆ.