Tuesday, March 9, 2021

ಅಹಮದಾಬಾದ್​​ನಲ್ಲಿ ಕೊರೋನಾ ಲಸಿಕೆಗಾಗಿ ನೋಂದಣಿ ಆರಂಭ

newsics.com
ಅಹಮದಾಬಾದ್​​(ಗುಜರಾತ್): ಅಹಮದಾಬಾದ್​​ನಲ್ಲಿ ಕೊರೋನಾ ಲಸಿಕೆಗಾಗಿ ನೋಂದಣಿ ಮಾಡಲು ಆದ್ಯತೆಯ ಆಧಾರದ ಜನರಿಗೆ ಆನ್​ಲೈನ್​ ಸೌಲಭ್ಯ ಕಲ್ಪಿಸಲಾಗಿದೆ.
ಗುಜರಾತ್’ನ ಅಧಿಕಾರಿಗಳು ಈ ಮಾಹಿತಿ ನೀಡಿದ್ದಾರೆ. www.ahmedabadcity.gov ಅಡಿಯಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ ಎಂದು ಅಹಮದಾಬಾದ್​ ಮುನ್ಸಿಪಾಲಿಟಿ ತಿಳಿಸಿದೆ.
ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕೆಲಸಗಾರರು. 50 ವರ್ಷಕ್ಕಿಂತ ಮೇಲ್ಪಟ್ಟವರಿಗಾಗಿ ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಲಾಗಿದೆ. ಕೊರೋನಾ ಲಸಿಕೆಗಾಗಿ ತಮ್ಮನ್ನು ನೋಂದಾಯಿಸಿಕೊಳ್ಳಬಯಸುವ ಜನರು ತಮ್ಮ ಡ್ರೈವಿಂಗ್​ ಲೈಸೆನ್ಸ್, ಮತದಾರರ ಗುರುತಿನ ಚೀಟಿ ಹಾಗೂ ಪಾನ್​ ಕಾರ್ಡ್​ಗಳನ್ನು ದಾಖಲೆಯಾಗಿ ನೀಡಬಹುದಾಗಿದೆ.
ಕೊರೋನಾ ಲಸಿಕೆಯ ಮೊದಲ ಹಂತದ ಆದ್ಯತೆಯ ಗುಂಪಾಗಿ ಸುಮಾರು 3.9 ಲಕ್ಷ ಆರೋಗ್ಯ ಕಾರ್ಯಕರ್ತರನ್ನು ಈಗಾಗಲೇ ಗುರುತಿಸಲಾಗಿದೆ ಎಂದು ಗುಜರಾತ್​ ಸರ್ಕಾರ ಈ ಮೊದಲು ತಿಳಿಸಿತ್ತು.

ರಾಜ್ಯದ 14 ಸಚಿವರು, ಶಾಸಕರು, ಅಧಿಕಾರಿ ಸೇರಿ 120 ಮಂದಿ ಮೇಲೆ ಲಸಿಕೆ ಪ್ರಯೋಗ

ಇನ್ನೂ 10 ವರ್ಷ ಕೊರೋನಾ ನಮ್ಮ ಜತೆ ಇರಲಿದೆ- ಬಯೋಟೆಕ್ ಸಿಇಓ

ವೈಕುಂಠ ಏಕಾದಶಿ; ತಿರುಪತಿ ಹುಂಡಿಯಲ್ಲಿ ದಾಖಲೆ ಹಣ ಸಂಗ್ರಹ

ಅಮೇಜಾನ್ ಕಚೇರಿ ದ್ವಂಸಗೊಳಿಸಿದ ನವನಿರ್ಮಾಣ ಸೇನಾ ಕಾರ್ಯಕರ್ತರು

ಮತ್ತಷ್ಟು ಸುದ್ದಿಗಳು

Latest News

ಉತ್ತರಾಖಂಡ್ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ ಸಾಧ್ಯತೆ

newsics.com ಡೆಹ್ರಾಡೂನ್:  ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಉತ್ತರಾಖಂಡ್ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ ನೀಡುವ ಸಾಧ್ಯತೆ ಬಹುತೇಕ ಖಚಿತವಾಗಿದೆ. ಸಂಜೆ ನಾಲ್ಕು ಗಂಟೆಗೆ ಅವರು ರಾಜ್ಯಪಾಲರನ್ನು ಭೇಟಿ...

ಕೊರೋನಾ ಲಸಿಕೆ ಪಡೆದ 48 ಗಂಟೆ ತನಕ ವಿಮಾನ ಚಲಾಯಿಸುವಂತಿಲ್ಲ

newsics.com ನವದೆಹಲಿ:  ಕೊರೋನಾ ಲಸಿಕೆ ಸ್ವೀಕಾರ ಸಂಬಂಧ ವಿಮಾನಯಾನ ಸಿಬ್ಬಂದಿಗೆ ನಾಗರಿಕ ವಿಮಾನಯಾನ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ. ವಿಮಾನದ ಪೈಲಟ್ ಮತ್ತು ಇತರ ಸಿಬ್ಬಂದಿ ಕೊರೋನಾ ಲಸಿಕೆ ಪಡೆದಿದ್ದರೆ ಇದನ್ನು ಕಟ್ಟು ನಿಟ್ಟಾಗಿ...

ಧೂಪದ ಮರ ಕಡಿಯುವಾಗ ಸಿಲುಕಿ ಮೂವರು ಯುವಕರ ಸಾವು

newsics.comಮಂಗಳೂರು: ಧೂಪದ ಮರ‌ ಕಡಿಯುವ ವೇಳೆ ಮೂವರು ಮರದಡಿ ಸಿಲುಕಿ ಮೃತಪಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಟ್ರಮೆ ಸಮೀಪ ಮಂಗಳವಾರ ನಡೆದಿದೆ.ಪಟ್ರಮೆ ಗ್ರಾಮದ ಅನಾರು ಬಳಿ‌...
- Advertisement -
error: Content is protected !!