Wednesday, January 27, 2021

ರಿಲಯನ್ಸ್’ನಿಂದ ಶೀಘ್ರ 5 ಜಿ ನೆಟ್’ವರ್ಕ್ ಆರಂಭ

ಮುಂಬೈ: ದೇಶದ ಅಗ್ರಗಣ್ಯ  ದೂರ ಸಂಪರ್ಕ ಸಂಸ್ಥೆ ರಿಲಯನ್ಸ್ ಶೀಘ್ರದಲ್ಲಿ  5 ಜಿ ನೆಟ್ ವರ್ಕ್ ನ್ನು ದೇಶಕ್ಕೆ ಪರಿಚಯಿಸಲಿದೆ. ರಿಲಯನ್ಸ್ ಸಂಸ್ಥೆಯ ಅಧ್ಯಕ್ಷ ಮುಕೇಶ್ ಅಂಬಾನಿ ಮುಂಬೈನಲ್ಲಿ ನಡೆದ ಸಂಸ್ಥೆಯ 43ನೇ ವಾರ್ಷಿಕ ಸಭೆಯಲ್ಲಿ ಈ ಮಾಹಿತಿ ನೀಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ಆತ್ಮ ನಿರ್ಭರ ಭಾರತ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ರಿಲಯನ್ಸ್ ಎಲ್ಲ ಅವಕಾಶಗಳನ್ನು ಬಳಸಿಕೊಳ್ಳಲಿದೆ ಎಂದು ಹೇಳಿದರು.

ಜಿಯೋ ದೂರವಾಣಿ ಕರೆ ಯಲ್ಲಿ  ಕ್ರಾಂತಿಕಾರಿ ಬದಲಾವಣೆಗೆ ಸಂಸ್ಥೆ ಮುನ್ನುಡಿ ಬರೆದಿದೆ. ಕರೆ ಸ್ವೀಕರಿಸಿದ ವ್ಯಕ್ತಿಯ  ತ್ರಿಡಿ ಚಿತ್ರ ಕಣ್ಣ ಮುಂದೆ ಬರುವ  ತಂತ್ರಜ್ಞಾವನ್ನು ಸಂಸ್ಥೆ ಅಭಿವೃಧಿಪಡಿಸಿದೆ. ಜಿಯೋ ಸಾಲ ಮುಕ್ತವಾಗಿದ್ದು, ನಿಗದಿತ ಅವಧಿಗಿಂತ ಮುನ್ನವೇ ಗುರಿ ತಲುಪಲಾಗಿದೆ ಎಂದು ಮುಕೇಶ್ ಅಂಬಾನಿ ಹೇಳಿದರು.

ಸಿಬಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇಕಡ 91.46 ಫಲಿತಾಂಶ

ಶಿಕ್ಷಣ ಕ್ಷೇತ್ರದಲ್ಲಿ ಡಿಜಿಟಲ್ ತಂತ್ರಜ್ಞಾನದ ಮೂಲಕ ವಿದ್ಯಾರ್ಥಿಗಳನ್ನು ತಲುಪುವ ಬೃಹತ್ ಯೋಜನೆ ಸಿದ್ದಪಡಿಸಲಾಗಿದೆ ಎಂದು ಮುಕೇಶ್ ಅಂಬಾನಿ ಹೇಳಿದರು. ದೇಶದ 200 ನಗರಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾದ  ಜಿಯೋ ಮಾರ್ಟ್ ಗೆ ಬಳಕೆದಾರರಿಂದ ಅತ್ಯುತ್ತಮ ಸ್ಪಂದನೆ ದೊರೆತಿದೆ ಎಂದು ಮುಕೇಶ್ ಅಂಬಾನಿ ಹೇಳಿದರು. ಸಣ್ಣ ವ್ಯಾಪಾರಿಗಳು ಮತ್ತು ಬೀದಿ ವ್ಯಾಪಾರಿಗಳ   ವ್ಯಾಪಾರ ಅಭಿವೃದ್ಧಿಗೆ ಜಿಯೋ ಮಾರ್ಟ್ ನೆರವಾಗಲಿದೆ ಎಂದು ಅಂಬಾನಿ ತಿಳಿಸಿದರು.

ಮತ್ತಷ್ಟು ಸುದ್ದಿಗಳು

Latest News

ಕೊರೋನಾ ಸೋಂಕಿತರಾಗಿದ್ದ ಶೇಕಡ 96.91 ಮಂದಿ ಗುಣಮುಖ

Newsics.com ನವದೆಹಲಿ: ದೇಶದಲ್ಲಿ ಕೊರೋನಾದ  ಅಬ್ಬರ ಇಳಿಮುಖವಾಗುತ್ತಿದೆ.ಕಳೆದ  24 ಗಂಟೆಯಲ್ಲಿ   12, 689  ಮಂದಿಯಲ್ಲಿ  ಕೊರೋನಾ ಸೋಂಕು ದೃಢಪಟ್ಟಿದೆ.  ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ1,06.89, 527...

ಕೊರೋನಾ ಸೃಷ್ಟಿಸಿದ್ದು ಶಿವನಂತೆ: ಇಬ್ಬರು ಮಕ್ಕಳನ್ನು ಕೊಂದ ತಾಯಿಯ ಹುಚ್ಚು ಹೇಳಿಕೆ

Newsics.com ತಿರುಪತಿ: ಮೂಢನಂಬಿಕೆಗೆ ಜೋತುಬಿದ್ದು ತನ್ನ ಇಬ್ಬರು ಹೆಣ್ಣು ಮಕ್ಕಳನ್ನು ಕೊಂದ ತಾಯಿ ಪದ್ಮಜ ಇದೀಗ ಹುಚ್ಚು ಹೇಳಿಕೆ ನೀಡುತ್ತಿದ್ದಾರೆ. ಈಗಲೂ ಕೂಡ ಸಾಮಾನ್ಯ ಸ್ಥಿತಿಗೆ ಮರಳದಿರುವ ಪದ್ಮಜ, ಹುಚ್ಚರಂತೆ ವರ್ತಿಸುತ್ತಿದ್ದಾರೆ. ಕೊರೋನಾ ಚೀನಾದಲ್ಲಿ ಸೃಷ್ಟಿಯಾಗಿಲ್ಲ....

ದೆಹಲಿ ಹಿಂಸಾಚಾರದಲ್ಲಿ 300 ಪೊಲೀಸರಿಗೆ ಗಾಯ

Newsics.com ನವದೆಹಲಿ: ಮಂಗಳವಾರ ದೆಹಲಿಯಲ್ಲಿ ರೈತರ ದಾಳಿಯಿಂದ 300 ಪೊಲೀಸರು ಗಾಯಗೊಂಡಿದ್ದಾರೆ ಎಂದು ದೆಹಲಿ ಪೊಲೀಸ್ ಇಲಾಖೆ ಹೇಳಿದೆ. ರೈತರು ಆಕ್ರೋಶದಿಂದ ಪೊಲೀಸರನ್ನು ಗುರಿಯಾಗಿರಿಸಿ ದಾಳಿ ನಡೆಸಿದ್ದಾರೆ. ಚೂಪಾದ ವಸ್ತುಗಳಿಂದ ಹಲ್ಲೆ ನಡೆಸಿದ್ದಾರೆ  ಎಂದು...
- Advertisement -
error: Content is protected !!