ನವದೆಹಲಿ: ಬ್ಯಾಂಕ್ ಖಾತೆ ತೆರೆಯಲು ಅಥವಾ ಖಾತೆಯನ್ನು ಮತ್ತೆ ಚಾಲ್ತಿಯಲ್ಲಿಡಲು ಧರ್ಮದ ಮಾಹಿತಿ ನೀಡಬೇಕೆಂಬ ವರದಿಗಳನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ. ಇದು ಆಧಾರ ರಹಿತ ವರದಿ ಎಂದು ಕೇಂದ್ರ ಹಣಕಾಸು ಸಚಿವಾಲಯದ ಕಾರ್ಯದರ್ಶಿ ರಾಜೀವ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.ಇಂತಹ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಇದು ಆಧಾರ ರಹಿತ ವರದಿ ಎಂದು ಅವರು ಹೇಳಿದ್ದಾರೆ.