Monday, May 17, 2021

ಕೊರೋನಾ ಸೋಂಕಿತರ ಚಿಕಿತ್ಸೆಗೆ ‌ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆ ಇಳಿಕೆ

newsics.com

ನವದೆಹಲಿ: ಕೊರೋನಾ ಸೋಂಕಿತ ರೋಗಿಗಳ ಚಿಕಿತ್ಸೆಗೆ ಬಳಸುವ ರೆಮ್​ಡಿಸಿವಿರ್ ಇಂಜೆಕ್ಷನ್ ಬೆಲೆಯನ್ನು ಫಾರ್ಮಾ ಕಂಪೆನಿಗಳು ‌ಸ್ವಪ್ರೇರಣೆಯಿಂದ ಇಳಿಕೆ ಮಾಡಿವೆ.
ಕೆಡಿಲಾ ಕಂಪನಿಯು ತನ್ನ ರೆಮ್ಡೆಕ್ ಬ್ರಾಂಡಿನ ರೆಮ್ಡೆಸಿವಿರ್ ಬೆಲೆಯನ್ನು 2800 ರೂ.ನಿಂದ 899 ರೂಪಾಯಿಗೆ ಇಳಿಸಿದೆ.
ಬಯೋಕಾನ್- 3,950ರೂ.ನಿಂದ 2,450ರೂ.ಗೆ, ಡಾಕ್ಟರ್ ರೆಡ್ಡೀಸ್ ಲ್ಯಾಬ್- ರೂ. 5,400ನಿಂದ ರೂ. 2,700ಕ್ಕೆ, ಸಿಪ್ಲಾ- 4 ಸಾವಿರ ರೂ.ನಿಂದ 3,000 ರೂ.ಗೆ, ಮೈಲಾನ್ ಫಾರ್ಮಸಿ-4,800ರೂ.ನಿಂದ 3,400ರೂ.ಗೆ, ಜ್ಯುಬಿಲೆಂಟ್ ಜೆನೆರಿಕ್ಸ್- 4,700ರೂ. ನಿಂದ 3,400ರೂ.ಗೆ, ಹೆಟೆರೋ ಹೆಲ್ತ್‌ಕೇರ್- ರೂ. 5,400ರಿಂದ ರೂ. 3,490ಕ್ಕೆ ಇಳಿಕೆ ಮಾಡಿದೆ.
ಕೇಂದ್ರ ಸರ್ಕಾರದ ಮಧ್ಯಪ್ರವೇಶದಿಂದ ಈ ಇಂಜೆಕ್ಷನ್ ಬೆಲೆಯಲ್ಲಿ ಇಳಿಕೆ ಆಗಿದ್ದು ವಿದೇಶಗಳಿಗೆ ರೆಮ್​ಡಿಸಿವಿರ್ ಇಂಜೆಕ್ಷನ್ ರಫ್ತು ನಿಷೇಧ ಮಾಡಲಾಗಿದೆ. ಹೀಗಾಗಿ ದೇಶದಲ್ಲಿ ಇಂಜೆಕ್ಷನ್ ಉತ್ಪಾದನೆಯನ್ನು ಹೆಚ್ಚಿಸುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.

ಮತ್ತಷ್ಟು ಸುದ್ದಿಗಳು

Latest News

ಮರದ ಮೇಲೆಯೇ 11 ದಿನ‌ ಐಸೋಲೇಟ್ ಆದ ಕೊರೋನಾ ಸೋಂಕಿತ ವಿದ್ಯಾರ್ಥಿ!

newsics.com ಹೈದರಾಬಾದ್: ಕೊರೋನಾ ಸೋಂಕಿತರು ಹೋಂ‌ ಐಸೋಲೇಷನ್ ಗೆ ಒಳಗಾಗಲು ಹಲವು‌ ಕುಟುಂಬಗಳು ಮನೆಯಲ್ಲಿ ಜಾಗದ ಅಭಾವವನ್ನೂ ಎದುರಿಸುತ್ತಿವೆ. ತೆಲಂಗಾಣದ ನಲಗೊಂಡ ಜಿಲ್ಲೆಯ ಹಲವು ಕುಟುಂಬಗಳು ಅಡುಗೆ ಕೋಣೆ...

ಏನಿದು ಲಸಿಕೆ ಪಾಸ್‌ಪೋರ್ಟ್‌?

newsics.com ನವದೆಹಲಿ: ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಕೋವಿಡ್ ವಿರುದ್ಧದ ಲಸಿಕೆ ಅಭಿಯಾನ ನಡೆಯುತ್ತಿರುವ ವೇಳೆಯಲ್ಲೇ 'ಲಸಿಕೆ ಪಾಸ್‌ಪೋರ್ಟ್‌' ಸದ್ದು ಮಾಡುತ್ತಿದೆ. ಇದೀಗ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿರುವ ಪದ. ಹೆಚ್ಚು ಜನರು ಲಸಿಕೆ...

ಫೇಸ್’ಬುಕ್’ನಲ್ಲಿ ಉಗ್ರ ಸಿದ್ಧಾಂತದ ಫೋಸ್ಟ್: ತಮಿಳುನಾಡಿನ 4 ಕಡೆ ಎನ್ಐಎ ಶೋಧ

newsics.com ಚೆನ್ನೈ: ಉಗ್ರ ಸಂಘಟನೆಗಳ ಸಿದ್ಧಾಂತ ಪ್ರತಪಾದಿಸುವ ಪೋಸ್ಟ್'ಗಳನ್ನು ಫೇಸ್'ಬುಕ್'ನಲ್ಲಿ ಹಂಚಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಭಾನುವಾರ ತಮಿಳುನಾಡಿನ ಮಧುರೈ ಜಿಲ್ಲೆಯ ನಾಲ್ಕು ಸ್ಥಳಗಳಲ್ಲಿ ಶೋಧ ನಡೆಸಿದೆ. ಮಧುರೈ ಜಿಲ್ಲೆಯ ಕಾಜಿಮಾರ್...
- Advertisement -
error: Content is protected !!