newsics.com
ಹೈದರಾಬಾದ್: ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ಖ್ಯಾತ ನೃತ್ಯ ನಿರ್ದೇಶಕ ಶಿವಶಂಕರ್ ಮಾಸ್ಟರ್(73) ಭಾನುವಾರ ನಿಧನರಾದರು.
ಹೈದರಾಬಾದ್ನ ಗಚ್ಚಿಬೌಲಿ ಎಐಜಿ ಆಸ್ಪತ್ರೆಯಲ್ಲಿ ಕೋವಿಡ್ಗೆ ಚಿಕಿತ್ಸೆ ಪಡೆಯುತ್ತಿದ್ದ ಶಿವಶಂಕರ್ ಅವರ ಶ್ವಾಸಕೋಶದಲ್ಲಿ ಸಂಪೂರ್ಣ ಸೋಂಕು ವ್ಯಾಪಿಸಿದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮೃತಪಟ್ಟರು ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಶಿವಶಂಕರ್ ಮಾಸ್ಟರ್ ತೆಲುಗು ಮತ್ತು ತಮಿಳು ಸೇರಿದಂತೆ ವಿವಿಧ ಭಾಷೆಗಳಲ್ಲಿ ಸುಮಾರು 800 ಚಿತ್ರಗಳ ಹಾಡುಗಳಿಗೆ ನೃತ್ಯ ಸಂಯೋಜಿಸಿದ್ದರು. ಮಗಧೀರ ಚಿತ್ರದ ಧೀರ.. ಧೀರ.. ಹಾಡಿನ ನೃತ್ಯ ಸಂಯೋಜನೆಗೆ 2011ರಲ್ಲಿ ಶಿವಶಂಕರ್ ಮಾಸ್ಟರ್ ಅವರಿಗೆ ರಾಷ್ಟ್ರ ಪ್ರಶಸ್ತಿ ಲಭಿಸಿತ್ತು.
ಶಿವಶಂಕರ್ ಅವರ ಪತ್ನಿ ಹಾಗೂ ಪುತ್ರನಿಗೂ ಕೋವಿಡ್ ಸೋಂಕು ತಗುಲಿದ್ದು, ಅವರ ಪತ್ನಿ ಮನೆಯಲ್ಲಿ ಕ್ವಾರಂಟೈನ್ ಆಗಿದ್ದರೆ, ಹಿರಿಯ ಪುತ್ರ ಆಸ್ಪತ್ರೆಯಲ್ಲಿದ್ದಾರೆ.
ರಾಜ್ಯದಲ್ಲಿ ಕೊರೋನಾ, ಒಮಿಕ್ರಾನ್ ಆತಂಕ: ಶಿಕ್ಷಣ ಸಂಸ್ಥೆಗಳಿಗೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ ಸರ್ಕಾರ
ಏರ್ಟೆಲ್, ವೊಡಾಫೋನ್ ಬೆನ್ನಲ್ಲೇ ಜಿಯೋ ಕೂಡ ಈಗ ದುಬಾರಿ: ಡಿಸೆಂಬರ್ನಿಂದ ಹೊಸ ದರ ಜಾರಿ
ಗುರುವಿನಂತಹ ದೈತ್ಯ ಗ್ರಹ ಪತ್ತೆ: ಅಲ್ಲಿ ವರ್ಷಕ್ಕೆ ಕೇವಲ 16 ಗಂಟೆಗಳು!