Monday, August 8, 2022

ಕೊರೋನಾ ನಿಯಮ ಸಡಿಲಿಕೆ ರದ್ದು; SBI ಮಿನಿಮಮ್ ಬ್ಯಾಲೆನ್ಸ್ ನಿಯಮ ಜಾರಿ

Follow Us

newsics.com
ನವದೆಹಲಿ: ಅಕ್ಟೋಬರ್ 1 ರಿಂದ ಚಾಲನಾ ಪರವಾನಗಿ ಹಾಗೂ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ ಬಿಐ) ನಲ್ಲಿ ಹೊಸ ನಿಯಮಗಳು ಜಾರಿಗೆ ಬರಲಿವೆ.
ಅ.1 ರಿಂದ ಏಕರೂಪದ ವಾಹನ ನೋಂದಣಿ ಕಾರ್ಡ್‌ಗಳು ಆರ್ ಸಿ, ಡಿಎಲ್ ಗಳನ್ನು ನೀಡಲಾಗುತ್ತದೆ. ಹೊಸ ಕಾರ್ಡ್ ನಲ್ಲಿ ಅತ್ಯಾಧುನಿಕ ಮೈಕ್ರೋಚಿಪ್ ಇರಲಿದ್ದು, ಕ್ಯುಆರ್ ಕೋಡ್ ಹಾಗೂ ನಿಯರ್ ಫೀಲ್ಡ್ ಕಮ್ಯುನಿಕೇಷನ್ (ಎನ್‌ಎಫ್ ಸಿ) ಗಳು ಇರಲಿವೆ. ಅಲ್ಲದೆ, ಡಿಎಲ್ ಹಾಗೂ ಆರ್ ಸಿಗಳನ್ನು ಅಪ್ಡೇಟ್ ಮಾಡಿಕೊಳ್ಳಬೇಕಾಗುತ್ತದೆ. ನೀವು ಕ್ರೆಡಿಟ್ ಕಾರ್ಡ್ ಗಳ ಮೂಲಕ ಪೆಟ್ರೋಲ್ ಬಂಕ್ ಗಳಲ್ಲಿ ಪಾವತಿ ಮಾಡಿದರೆ ರಿಯಾಯಿತಿ ಇರುವುದಿಲ್ಲ. ಆದರೆ, ಡೆಬಿಟ್ ಕಾರ್ಡ್ ಮತ್ತಿತರ ಡಿಜಿಟಲ್ ಮೋಡ್ ಗಳ ಮೂಲಕ ಪಾವತಿ ಮಾಡಿದರೆ ರಿಯಾಯಿತಿ ದೊರೆಯಲಿದೆ.
ಕೊರೋನಾ ಹಿನ್ನೆಲೆಯಲ್ಲಿ ಕಳೆದ ಆರು ತಿಂಗಳಿಂದ ಮಿನಿಮಮ್ ಬ್ಯಾಲೆನ್ಸ್ ನಿಯಮ ಜಾರಿಯಲ್ಲಿರಲಿಲ್ಲ. ಆದರೆ, ಅ.1 ರಿಂದ
ಮಿನಿಮಮ್ ಬ್ಯಾಲೆನ್ಸ್ ನಿಯಮ ಜಾರಿಯಾಗಲಿದ್ದು, ಕನಿಷ್ಟ ತಿಂಗಳ ಬ್ಯಾಲೆನ್ಸ್ 3,000, ಗ್ರಾಮೀಣ ಭಾಗದಲ್ಲಿ 1,000 ರೂಪಾಯಿಗಳಿಗೆ ಎಸ್ ಬಿ ಐ ನಿಗದಿಪಡಿಸಿದೆ. ಒಂದು ವೇಳೆ ಕನಿಷ್ಟ ಮೊತ್ತ ಖಾತೆಯಲ್ಲಿ ಇಲ್ಲದೇ ಇದ್ದಿದ್ದರೆ ವಿಧಿಸಲಾಗುತ್ತಿದ್ದ ದಂಡದ ಮೊತ್ತವನ್ನೂ ಕಡಿಮೆ ಮಾಡಲಿದೆ. ಗೃಹ ಸಾಲ ವಾಹನ, ಖಾಸಗಿ ಸಾಲದ ಮೇಲಿನ ಬಡ್ಡಿ ದರ ಇಳಿಕೆಯಾಗಲಿದೆ.

ಮೈಸೂರು ಜಂಬೂಸವಾರಿ; 2 ಸಾವಿರ ಮಂದಿಗೆ ಅವಕಾಶ ಸಾಧ್ಯತೆ

ನಟ ಶರಣ್ ಆಸ್ಪತ್ರೆಯಿಂದ ಡಿಸ್ಚಾರ್ಜ್

ಆ್ಯಮೆ ಕೋನಿ ಬ್ಯಾರೆಟ್ ಅಮೆರಿಕ ಸುಪ್ರೀಂ ಕೋರ್ಟ್ ನೂತನ ಜಡ್ಜ್

ಕೃಷಿ ಮಸೂದೆಯಿಂದ ರೈತರಿಗೆ ಲಾಭ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಅಭಿಮತ

ದಿನೇಶ್ ಗುಂಡೂರಾವ್ ಗೆ ಕೊರೋನಾ ಸೋಂಕು

ಮಾಜಿ ಕೇಂದ್ರ ಸಚಿವ ಹಿರಿಯ ರಾಜಕಾರಣಿ ಜಸ್ವಂತ್ ಸಿಂಗ್ ಇನ್ನಿಲ್ಲ

ಮತ್ತಷ್ಟು ಸುದ್ದಿಗಳು

vertical

Latest News

ಪ್ರವೀಣ್ ಹತ್ಯೆ ಪ್ರಕರಣ: ಮತ್ತೆ ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ

newsics.com ಮಂಗಳೂರು: ಬೆಳ್ಳಾರೆಯ ಪ್ರವೀಣ್ ಹತ್ಯೆ  ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಇಬ್ಬರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಆರೋಪಿಗಳನ್ನು  ಅಬೀದ್ ಮತ್ತು ನೌಫಾಲ್ ಎಂದು ಗುರುತಿಸಲಾಗಿದೆ. ಇಬ್ಬರು...

ಏಳು ವರ್ಷದ ಮಗುವಿನಲ್ಲಿ ಮಂಕಿ ಫಾಕ್ಸ್ ರೋಗ ಲಕ್ಷಣ ಪತ್ತೆ

newsics.com ತಿರುವನಂತಪುರಂ: ಕೇರಳದಲ್ಲಿ ಏಳು ವರ್ಷದ ಮಗುವಿನಲ್ಲಿ  ಮಂಕಿ ಫಾಕ್ಸ್ ರೋಗದ ಲಕ್ಷಣ ಕಂಡು ಬಂದಿದೆ. ಇದೀಗ ಸ್ಯಾಂಪಲ್ ನ್ನು  ಉನ್ನತ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ. ಮಗುವನ್ನು ಪೆರಿಯಾರಂ ಮೆಡಿಕಲ್ ಕಾಲೇಜಿನಲ್ಲಿ  ದಾಖಲಿಸಲಾಗಿದ್ದು,  ಚಿಕಿತ್ಸೆ ಮುಂದುವರಿದಿದೆ ಬ್ರಿಟನ್ ನಿಂದ...

ಜಮ್ಮು ಕಾಶ್ಮೀರದ ಹಲವೆಡೆ ಎನ್ ಐ ಎ ದಾಳಿ

newsics.com ಶ್ರೀನಗರ: ಭಯೋತ್ಪಾದಕ ಸಂಘಟನೆಗಳಿಗೆ ಕೆಲವು ವ್ಯಕ್ತಿಗಳು  ಹಣಕಾಸಿನ ನೆರವು ನೀಡುತ್ತಿದ್ದಾರೆ ಎಂಬ ಶಂಕೆ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದ ಹಲವೆಡೆ ಎನ್ ಐ ಎ ದಾಳಿ ನಡೆಸಿದೆ. ಸ್ಥಳೀಯರು ಈ ಕೃತ್ಯದಲ್ಲಿ ತೊಡಗಿದ್ದಾರೆ ಎಂದು ಶಂಕಿಸಲಾಗಿದೆ. ಈ...
- Advertisement -
error: Content is protected !!