ನವದೆಹಲಿ: ಭಯೋತ್ಪಾದಕರ ದಾಳಿ ಭೀತಿ ಹಿನ್ನೆಲೆಯಲ್ಲಿ ಈ ಬಾರಿಯ ಗಣರಾಜ್ಯೋತ್ಸವ ಸಮಾರಂಭಕ್ಕೆ ಅಭೂತಪೂರ್ವ ಭದ್ರತೆ ಮಾಡಲಾಗಿದೆ. ಕೇಂದ್ರ ಗೃಹ ಖಾತೆ ಈಗಾಗಲೆ ಶಂಕಿತ ಭಯೋತ್ಪಾದಕರ ಚಿತ್ರಗಳನ್ನು ಕೂಡ ಬಿಡುಗಡೆ ಮಾಡಿದ್ದು, ದೆಹಲಿಯ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ. ಈ ಮಧ್ಯೆ ಗಣರಾಜ್ಯೋತ್ಸವ ಪರೇಡ್ ಪೂರ್ವಭಾವಿಯಾಗಿ ಪೂರ್ಣ ಮಟ್ಟದ ರಿಹರ್ಸಲ್ ಇಂದು ನಡೆಯಲಿದೆ. ಪರೇಡ್ ನಲ್ಲಿ ಭಾಗವಹಿಸುವ ಎಲ್ಲ ಭದ್ರತಾಪಡೆ ಸಿಬ್ಬಂದಿ ಸಮವಸ್ತ್ರದಲ್ಲಿ ಪಾಲ್ಗೊಳ್ಳಲಿದ್ದಾರೆ.