ಮುಂಬೈ ಪೊಲೀಸರಿಂದ ರಿಪಬ್ಲಿಕ್ ಸುದ್ದಿ ವಾಹಿನಿಯ ಘನ್ ಶ್ಯಾಮ್ ವಿಚಾರಣೆ

Newsics.com ಮುಂಬೈ: ಟಿಆರ್ ಪಿ ಹಗರಣದ ತನಿಖೆ ನಡೆಸುತ್ತಿರುವ ಮುಂಬೈ ಪೊಲೀಸರು ರಿಪಬ್ಲಿಕ್  ಸುದ್ದಿ ವಾಹಿನಿಯ ಡಿಸ್ಟ್ರಿಬ್ಯೂಷನ್ ಹೆಡ್ ಘನ್ ಶ್ಯಾಮ್ ಅವರನ್ನು ವಿಚಾರಣೆಗೆ ಗುರಿಪಡಿಸಿದೆ. ಇಂದು ಮುಂಜಾನೆ ಈ  ಬೆಳವಣಿಗೆ ಸಂಭವಿಸಿದೆ. ಇದೀಗ ಘನ್ ಶ್ಯಾಮ್ ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಇದೇ ವೇಳೆ, ನ್ಯಾಯಾಂಗ ಬಂಧನದಲ್ಲಿರುವ ರಿಪಬ್ಲಿಕ್ ಸುದ್ದಿವಾಹಿನಿಯ ಮುಖ್ಯ ಸಂಪಾದಕ ಅರ್ನಾಬ್ ಗೋ ಸ್ವಾಮಿಯ ವಿಚಾರಣೆಗೆ ನ್ಯಾಯಾಲಯ ಪೊಲೀಸರಿಗೆ ಅನುಮತಿ ನೀಡಿದೆ.   ನಿರ್ದಿಷ್ಟ ಅವಧಿಯಲ್ಲಿ ಮಾತ್ರ ವಿಚಾರಣೆ ನಡೆಸಬೇಕು ಎಂದು  ನ್ಯಾಯಾಲಯ ಸೂಚಿಸಿದೆ. … Continue reading ಮುಂಬೈ ಪೊಲೀಸರಿಂದ ರಿಪಬ್ಲಿಕ್ ಸುದ್ದಿ ವಾಹಿನಿಯ ಘನ್ ಶ್ಯಾಮ್ ವಿಚಾರಣೆ