newsics.com
ನವದೆಹಲಿ: ಪ್ರಧಾನಿ ಮೋದಿ ನೇತೃತ್ವದ ಎನ್ಡಿಎ ಅವಧಿಯಲ್ಲಿಯೇ ಹಣದುಬ್ಬರ ಅಧಿಕವಾಗಿದ್ದು, ಈ ಪ್ರಮಾಣ ಶೇ.7.61ಕ್ಕೆ ಏರಿಕೆಯಾಗಿದೆ.
ಆಹಾರ ಉತ್ಪನ್ನಗಳ ಬೆಲೆಯಲ್ಲಿ ಹೆಚ್ಚಳ ಆಗಿರುವುದರಿಂದ ಅಕ್ಟೋಬರ್ ನಲ್ಲಿ ಹಣದುಬ್ಬರ ಹೆಚ್ಚಾಗಿದೆ ಎನ್ನಲಾಗಿದೆ. ಕಳೆದ ಆರೂವರೆ ವರ್ಷಗಳಲ್ಲಿ ಚಿಲ್ಲರೆ ಹಣದುಬ್ಬರ ಶೇಕಡ 7.61ಕ್ಕೆ ಏರಿಕೆಯಾಗಿದ್ದು, ಅತ್ಯಧಿಕವಾಗಿದೆ. ಆರ್ ಬಿಐ ನಿಗದಿ ಮಾಡಿಕೊಂಡಿದ್ದಕ್ಕಿಂತಲೂ ಇದು ಹೆಚ್ಚಿನದಾಗಿದೆ. ಕಳೆದ ವರ್ಷದ ಅಕ್ಟೋಬರ್ ನಲ್ಲಿ ಶೇ. 4.62ರಷ್ಟಿತ್ತು.
ಗ್ರಾಹಕ ದರ ಸೂಚ್ಯಂಕ(ಸಿಪಿಐ) ಆಧರಿಸಿದ ಚಿಲ್ಲರೆ ಹಣದುಬ್ಬರ ಈ ವರ್ಷದ ಸೆಪ್ಟೆಂಬರ್ ನಲ್ಲಿ ಶೇ.7.27ರಷ್ಟಿತ್ತು. ಕಳೆದ ಅಕ್ಟೋಬರ್ ನಲ್ಲಿ ಶೇ. 7.61ಕ್ಕೆ ಏರಿಕೆಯಾಗಿದೆ. ಆಹಾರ ಉತ್ಪನ್ನಗಳ ಹಣದುಬ್ಬರ ಸೆಪ್ಟೆಂಬರ್ ಶೇ.10.68ರಷ್ಟಿದ್ದು ಅಕ್ಟೋಬರ್ ನಲ್ಲಿ ಶೇ. 11.07ಕ್ಕೆ ಏರಿಕೆಯಾಗಿದೆ.
ಮನಿ ಲ್ಯಾಂಡರಿಂಗ್ ಪ್ರಕರಣ; ದೀಪಕ್ ಕೊಚ್ಚಾರ್ ಜಾಮೀನು ಅರ್ಜಿ ತಿರಸ್ಕೃತ
ಚಾಲಕನ ಸಮಯಪ್ರಜ್ಞೆ; ಪ್ರಪಾತಕ್ಕೆ ಬೀಳಬೇಕಿದ್ದ ಬಸ್ ಬಚಾವ್!
ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಕುನಾಲ್ ಕಮ್ರಾಗೆ ‘ಸುಪ್ರೀಂ’ ಸಂಕಷ್ಟ
ಖ್ಯಾತ ಪತ್ರಕರ್ತ, ಸಾಹಿತಿ ರವಿ ಬೆಳಗೆರೆ ಇನ್ನಿಲ್ಲ