ದೆಹಲಿ: ಅರೆಸೇನಾ ಪಡೆಗಳಲ್ಲಿನ ಪ್ರಾಣಿಗಳಿಗೆ ಇನ್ನು ನಿವೃತ್ತಿ ಸೌಲಭ್ಯ ದೊರೆಯಲಿದೆ.
ವೃತ್ತಿ ಹೊಂದುವ ಪ್ರಾಣಿಗಳಿಗೆ ಪುನರ್ವಸತಿ ಕೇಂದ್ರಗಳಲ್ಲಿ ಆಶ್ರಯ ಕಲ್ಪಿಸುವುದರ ಜತೆಗೆ ನಿವೃತ್ತಿ ನಂತರವೂ ಅವುಗಳಿಗೆ ಶೇ. 70ರಷ್ಟು ನಿರ್ವಹಣಾ ವೆಚ್ಚ ನೀಡಲಾಗುತ್ತದೆ. ಭದ್ರತಾ ಪಡೆಗಳ ಕುರಿತ 6 ಸದಸ್ಯರ ಕೇಂದ್ರೀಯ ಸಮಿತಿ ಈ ಹೊಸ ನಿಯಮವನ್ನು ಪ್ರಸ್ತಾಪಿಸಿದೆ.
ಭಾರತ-ಟಿಬೆಟ್ ಗಡಿ ಪೊಲೀಸ್ (ಐಟಿಬಿಪಿ), ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್), ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್), ಅಸ್ಸಾಂ ರೈಫಲ್ಸ್ ಮತ್ತು ರಾಷ್ಟ್ರೀಯ ಭದ್ರತಾ ಪಡೆಯ (ಎನ್ಎಸ್ಜಿ) ತಲಾ ಒಬ್ಬಬ್ಬರು ಸದಸ್ಯರಿರುವ ಕೇಂದ್ರೀಯ ಸಮಿತಿಯು ಅರೆಸೇನಾ ಪಡೆಗಳ ಪ್ರಾಣಿಗಳ ನಿವೃತ್ತಿ ಸೌಲಭ್ಯಗಳಿಗಾಗಿ ಏಕಮಾದರಿಯ ಕಾರ್ಯನೀತಿಯನ್ನು (ಎಸ್ಒಪಿ) ರಚಿಸಿದೆ. ಅನುಮೋದನೆಗಾಗಿ ಇದನ್ನು ಗೃಹ ಸಚಿವಾಲಯಕ್ಕೆ ಕಳುಹಿಸಲಾಗಿದ್ದು, ಈ ಹಣಕಾಸು ವರ್ಷದಲ್ಲೇ ಈ ಯೋಜನೆ ಜಾರಿಗೆ ಬರಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶ್ವಾನಗಳು ಕಣ್ಗಾವಲು, ಸ್ಪೋಟಕಗಳ ಶೋಧನೆಯಲ್ಲಿ ಕೆಲಸ ನಿರ್ವಹಿಸಿದರೆ, ಕುದುರೆ, ಕತ್ತೆ, ಯಾಕ್ ಹಾಗೂ ಒಂಟೆಗಳನ್ನು ಗಸ್ತು ತಿರುಗಲು ಮತ್ತು ಸರಕು ಸಾಗಣೆಗೆ ಬಳಸಲಾಗುತ್ತದೆ. 8ರಿಂದ 16 ಸೇವೆ ಬಳಿಕ ನಿವೃತ್ತಿಯಾಗುತ್ತವೆ. ಈವರೆಗಿನಂತೆ ನಿವೃತ್ತಿ ಪಡೆದ ಪ್ರಾಣಿಗಳನ್ನು ಹರಾಜು ಹಾಕುವುದಿಲ್ಲ.
ಶ್ವಾನಗಳ ಸಾರಿಗೆ ನಿಯಮದಲ್ಲೂ ಬದಲಾವಣೆ ತರಲಾಗಿದ್ದು, ಶ್ವಾನಗಳು ಹಾಗೂ ಅವುಗಳ ನಿಯಂತ್ರಕರು ಇನ್ಮುಂದೆ ರೈಲಿನ ಫಸ್ಟ್ಕ್ಲಾಸ್ ಬೋಗಿಯಲ್ಲಿ ಪ್ರಯಾಣಿಸಬಹುದಾಗಿದೆ.
ಭದ್ರತಾ ಪಡೆಗಳಲ್ಲಿನ ಪ್ರಾಣಿಗಳಿಗೆ ನಿವೃತ್ತಿ ಸವಲತ್ತು ಶೀಘ್ರ
Follow Us