NEWSICS.COM
ತಿರುಪತಿ: ಕಾರಿ-ಲಾರಿ ಡಿಕ್ಕಿಯಾಗಿ ಕರ್ನಾಟಕದ ಇಬ್ಬರು ಸೇರಿ ಮೂವರು ಮಹಿಳೆಯರು ಮೃತಪಟ್ಟ ಘಟನೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಶನಿವಾರ (ಡಿ.26) ನಡೆದಿದೆ.
ತಿರುಮಲದಿಂದ ಬರುತ್ತಿದ್ದ ಕಾರಿಗೆ ಲಾರಿ ಡಿಕ್ಕಿಹೊಡೆದ ಪರಿಣಾಮ ದುರಂತ ಸಂಭವಿಸಿದೆ.
ಕಾರು ಬೆಂಗಳೂರಿನ ಮೂಲದ್ದಾಗಿದೆ ಎನ್ನಲಾಗಿದ್ದು, 8 ಮಂದಿ ತಿರುಮಲ ವೆಂಕಟೇಶ್ವರನ ದರ್ಶನ ಪಡೆದು ವಾಪಸ್ಸಾಗುವ ವೇಳೆ ಘಟನೆ ಸಂಭವಿಸಿದೆ. 5ಮಂದಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳದಲ್ಲೇ ಮೃತರಾದವರನ್ನು ರಾಜಮ್ಮ (80), ಅನ್ನಪೂರ್ಣ (60) ಮತ್ತು ಜ್ಯೋತಿ (14) ಎಂದು ಗುರುತಿಸಲಾಗಿದೆ.