ಮುಂಬೈ: ಪ್ರತಿಷ್ಠಿತ ರಿಚರ್ಡ್ ಡಾಕಿನ್ಸ್ ಪುರಸ್ಕಾರಕ್ಕೆ ಪ್ರಸಿದ್ಧ ಗೀತರಚನೆಕಾರ, ಚಲನಚಿತ್ರ ಸಾಹಿತ್ಯ ರಚನೆಕಾರ ಜಾವೇದ್ ಅಖ್ತರ್ ಭಾಜನರಾಗಿದ್ದಾರೆ.
ಇಂಗ್ಲೆಂಡಿನ ಖ್ಯಾತ ಜೀವಶಾಸ್ತ್ರಜ್ಞ, ಲೇಖಕ ರಿಚರ್ಡ್ ಡಾಕಿನ್ಸ್ ಹೆಸರಿನ ಈ ಜಾಗತಿಕ ಪ್ರಶಸ್ತಿಯನ್ನು, ಜಾತ್ಯತೀತತೆ, ವೈಚಾರಿಕತೆ, ವೈಜ್ಞಾನಿಕ ಸತ್ಯಗಳನ್ನು ಎತ್ತಿಹಿಡಿಯುವ ವ್ಯಕ್ತಿಗಳಿಗೆ ಈ ಪುರಸ್ಕಾರ ನೀಡಲಾಗುತ್ತದೆ.
ವಿಮರ್ಶಾತ್ಮಕ ಚಿಂತನೆ, ವಿಮರ್ಶಕ ದೃಷ್ಟಿಯಿಂದ ಧಾರ್ಮಿಕ ಸಿದ್ಧಾಂತದ ಪರಿಶೀಲನೆ, ಮಾನವ ಪ್ರಗತಿ ಮತ್ತು ಮಾನವತಾವಾದಿ ಮೌಲ್ಯಗಳನ್ನು ಮುಂದುವರಿಸಿಕೊಂಡು ಬಂದಿರುವುದನ್ನು ಪರಿಗಣಿಸಿ ಅಖ್ತರ್ರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಅವರ ಪತ್ನಿ, ಖ್ಯಾತ ಸಿನಿಮಾ ನಟಿ ಶಬನಾ ಅಝ್ಮಿ ಟ್ವೀಟ್ ಮಾಡಿದ್ದಾರೆ. ರಿಕಿ ಗೆರ್ವಾಯ್ಸಿ, ಸ್ಟೀಫನ್ ಫ್ರಯ್ ಹಾಗೂ ಬಿಲ್ ಮಹೆರ್ ಮುಂತಾದವರಿಗೆ ಈ ಪುರಸ್ಕಾರ ಸಂದಿದೆ.