- ಮಾಜಿ ಪ್ರಧಾನಿ ಅಟಲ್ ಗೆ ಬರ್ತ್ ಡೇ ಗಿಫ್ಟ್
ದೆಹಲಿ: ರೋಹತಂಗ್ ಕಣಿವೆಯ ಮನಾಲಿ ಮತ್ತು ಲೇಹ್ ನಡುವಿನ ಅಂತರ ಕಡಿಮೆಗೊಳಿಸಲು ಕಾರಣವಾಗಿದ್ದ ಆಯಕಟ್ಟಿನ ಸುರಂಗ ಮಾರ್ಗಕ್ಕೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹೆಸರು ಮರುನಾಮಕರಣ ಮಾಡಲು ಕೇಂದ್ರ ಸಮ್ಮತಿಸಿದೆ.
ವಾಜಪೇಯಿ ಅವರ ಹುಟ್ಟುಹಬ್ಬದ ದಿನವಾದ ನಾಳೆ ಈ ಮರುನಾಮಕರಣ ನಡೆಯಲಿದೆ. ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
2000ರಲ್ಲಿ ಜೂನ್ 3ರಂದು ಈ ಆಯಕಟ್ಟಿನ ಸುರಂಗ ಕೊರೆಯಲು ವಾಜಪೇಯಿ ನೇತೃತ್ವದ ಸರ್ಕಾರ ನಿರ್ಧಾರ ಕೈಗೊಂಡಿತ್ತು. 8.8 ಕಿ.ಮೀ. ಉದ್ದದ ಈ ಸುರಂಗ ಮಾರ್ಗ 3,000 ಮೀಟರ್ ಎತ್ತರದಲ್ಲಿರುವ ಜಗತ್ತಿನ ಅತಿ ಉದ್ದದ ಸುರಂಗ ಎಂಬ ಕೀರ್ತಿಗೆ ಭಾಜನವಾಗಿದೆ.