Newsics.Com
ನವದೆಹಲಿ: ಮುಂದಿನ ವರ್ಷ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತಮಿಳುನಾಡಿನಿಂದ ಕಣಕ್ಕಿಳಿಯಲಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ.
ಮೋದಿ ಅವರನ್ನು ತಮಿಳುನಾಡಿನ ಜನತೆಗೆ ಇಲ್ಲಿನವರೇ ಎಂಬುದಾಗಿ ಪರಿಗಣಿಸಿದ್ದಾರೆ ಎಂದು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ. ಅಣ್ಣಾಮಲೈ ಹೇಳಿದ್ದಾರೆ.
ತಮಿಳುನಾಡಿನ ರಾಮನಾಥಪುರಂ ಕ್ಷೇತ್ರದಿಂದ ಮೋದಿ ಸ್ಪರ್ಧಿಸಲಿದ್ದಾರೆ ಎಂಬ ಊಹಾಪೋಹ ಇತ್ತೀಚೆಗೆ ಹರಿದಾಡಿತ್ತು. ಇದರ ಅರ್ಥ ಮೋದಿಯವರು ಪ್ರಾದೇಶಿಕ ಅಡೆತಡೆಗಳನ್ನು ಮೀರಿದ ನಾಯಕ ಎಂದು ಅಣ್ಣಾಮಲೈ ಬಣ್ಣಿಸಿದ್ದಾರೆ.ಈ ವಿಚಾರವಾಗಿ ಬಿಜೆಪಿಯಿಂದ ಈವರೆಗೆ ಅಧಿಕೃತ ಹೇಳಿಕೆ ಬಿಡುಗಡೆಯಾಗಿಲ್ಲ.